Home » ಸೌಜನ್ಯ ಸಾಕ್ಷಿಗಳಲ್ಲಿ ಮತ್ತೋರ್ವ ಮರಣ, ಡಾ. ಆದಂ ವಿಧಿವಶ !

ಸೌಜನ್ಯ ಸಾಕ್ಷಿಗಳಲ್ಲಿ ಮತ್ತೋರ್ವ ಮರಣ, ಡಾ. ಆದಂ ವಿಧಿವಶ !

by ಹೊಸಕನ್ನಡ
0 comments
Soujanya Case

Soujanya Case: ಧರ್ಮಸ್ಥಳದ ಸೌಜನ್ಯ ಹತ್ಯಾ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ದಿಡೀರ್ ಆಗಿ ಮರಣ ಹೊಂದಿದ್ದಾರೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ, ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾದ ಬಹು ಮುಖ್ಯ ಸಾಕ್ಷಿಗಳಲ್ಲಿ ಒಂದಾದ ಡಾ.ಅದಂ ನಿಧನರಾಗಿದ್ದಾರೆ.

ಡಾಕ್ಟರ್ ಆದಮ್ ಅವರು ಇದೀಗ ಮರಣ ಹೊಂದಿದ್ದಾರೆ. ಡಾಕ್ಟರ್ ಆದಮ್ ಅವರಿಗೆ ಬ್ರೈನ್ ಹೆವರೇಜ್ ಆಗಿದ್ದು ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಡಾಕ್ಟರ್ ಅದಮ್ ಉಸ್ಮಾನ್ ರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಹುಕಾಲ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಅವರು ನಿವೃತ್ತರಾಗಿದ್ದರು.

ಡಾಕ್ಟರ್ ಆದಂ ಮತ್ತು ಡಾಕ್ಟರ್ ರಶ್ಮಿ ಅವರ ಮೇಲೆ ಒಟ್ಟಾರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ತಿರುಚಿದ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಬೆಳಕಿಲ್ಲದೆ ಕತ್ತಲಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ನೆರವಾಗಿದ್ದಾರೆ ಎನ್ನುವ ಗುರುತರವಾದ ಆರೋಪ ಅವರ ಮೇಲಿತ್ತು. ಆರೋಪಕ್ಕೆ ತಕ್ಕಂತೆ ಕೋರ್ಟು ಕೂಡ ಯಾವುದೇ ರೀತಿಯಲ್ಲಿ ಪೋಸ್ಟ್ ಮಾರ್ಟಂ ಸ್ಯಾಂಪಲ್ಸ್ ಅನ್ನು ವೈದ್ಯಕೀಯ ತಂಡ ಸಂಗ್ರಹಿಸಿಲ್ಲ ಎಂದು ದೂರಿತ್ತು.

ತಟ್ಟಿತಾ ಸೌಜನ್ಯಾ ಶಾಪ ?:
ಅಚ್ಚರಿಯ ವಿಷಯವೆಂದರೆ ಸೌಜನ್ಯ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಒಬ್ಬೊಬ್ಬರು ಅನಾರೋಗ್ಯ ಬೀಳುತ್ತಿದ್ದಾರೆ. ಅದರಂತೆಯೇ, ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಹಲವು ಕುಟುಂಬಗಳಲ್ಲಿ ತೀವ್ರ ಪ್ರಮಾಣದ ಅನಾರೋಗ್ಯ ಕಾಣಿಸಿಕೊಂಡಿದೆ. ಸೌಜನ್ಯ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಹಲವು ಮಂದಿ ದೈಹಿಕ ಮತ್ತು ಮಾನಸಿಕ ಕ್ಷೋಭೆಗೆ ಒಳಗಾಗಿರುವುದು ಹೊಸದೇನಲ್ಲ. ಇದೀಗ ಆದಂ ಅವರ ನಿಧನ ಈ ನಂಬಿಕೆಗೆ ಪುಷ್ಟಿ ನೀಡುತ್ತಿದ್ದು ಅವರ ಅಕಾಲಿಕ ಮೃತ್ಯುವಿಗೆ ಸೌಜನ್ಯ ಶಾಪವೇ ಕಾರಣ ಆಯ್ತಾ ? ಎನ್ನುವ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಬೆಂಗಳೂರು ರೋಡ್ ಶೋ ವೇಳೆ ಮೋದಿ ಭದ್ರತೆಯಲ್ಲಿ ಭಾರೀ ಲೋಪ; ರಸ್ತೆಗಿಳಿದು ಚೊಂಬು ತೋರಿಸಿದ ನಲಪಾಡ್

 

You may also like

Leave a Comment