Home » ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ “ತೃಪ್ತ” ಕಥೆಗೆ ದ್ವಿತೀಯ ಬಹುಮಾನ

ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ “ತೃಪ್ತ” ಕಥೆಗೆ ದ್ವಿತೀಯ ಬಹುಮಾನ

0 comments

ಬೆಂಗಳೂರು : ಅಕ್ಕನಮನೆ ಪುಸ್ತಕ ಪ್ರಕಾಶನದ ವತಿಯಿಂದ ರಾಜ್ಯಮಟ್ಟದ ದೇಸಿ ದಿಬ್ಬಣ ಸಾಹಿತ್ಯ ಸ್ಪರ್ಧೆ- 2022ರ ಪ್ರಯುಕ್ತ ಆಯೋಜಿಸಲಾದ ಕಥಾ ಸ್ಪರ್ಧೆಯಲ್ಲಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ “ತೃಪ್ತ” ಕಥೆಗೆ ದ್ವಿತೀಯ ಬಹುಮಾನ ಲಭಿಸಿದೆ.

ಇದೇ ತಿಂಗಳು ಏಪ್ರಿಲ್ 18ರಂದು, ಸೋಮವಾರ ಸಂಜೆ 4 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಕನಮನೆ ಪುಸ್ತಕ ಪ್ರಕಾಶನದ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅಕ್ಕನಮನೆ ಪುಸ್ತಕ ಪ್ರಕಾಶನದ ಅಧ್ಯಕ್ಷರಾದ ಶ್ರೀಮತಿ ಸಿ.ಸಿ. ಹೇಮಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚನೆಯ “ಸರಿಯಾವುದು ಎಂದಾರಿಸು ಮನವೇ…” ಮತ್ತು “ಗಹನ” ಕೃತಿಗಳ ಲೋಕಾರ್ಪಣೆ ಸಹ ನಡೆಯಲಿದೆ.

You may also like

Leave a Comment