Home » ಬಜ್ಪೆ:ರಾತ್ರಿ ಉಂಡು ಮಲಗಿದ್ದ ಸಹೋದರಿಯರಿಬ್ಬರು ನಾಪತ್ತೆ!! ತಡರಾತ್ರಿ ಬೆಳಕಿಗೆ ಬಂದ ಘಟನೆ-ಬಜ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

ಬಜ್ಪೆ:ರಾತ್ರಿ ಉಂಡು ಮಲಗಿದ್ದ ಸಹೋದರಿಯರಿಬ್ಬರು ನಾಪತ್ತೆ!! ತಡರಾತ್ರಿ ಬೆಳಕಿಗೆ ಬಂದ ಘಟನೆ-ಬಜ್ಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

0 comments

ಬಜ್ಪೆ: ಠಾಣಾ ವ್ಯಾಪ್ತಿಯ ಕೊಂಚಾರ್ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದ ಇಬ್ಬರು ಸಹೋದರಿಯರು ಕಾಣೆಯಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ಮುಬೀನ(22) ಹಾಗೂ ಬುಶ್ರಾ(21)ಎಂದು ಗುರುತಿಸಲಾಗಿದೆ. ಫೆಬ್ರವರಿ 07 ರ ರಾತ್ರಿ ಮನೆಮಂದಿಯೊಂದಿಗೆ ಊಟ ಮಾಡಿ ಮಲಗಿದ್ದ ಯುವತಿಯರು ರಾತ್ರಿ ಸುಮಾರು 02 ಗಂಟೆಯ ಹೊತ್ತಿಗೆ ನಾಪತ್ತೆಯಾಗಿದ್ದಾರೆ. ಯುವತಿಯರ ತಂದೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು,ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನಕ್ಕೆ ಬಾರದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

You may also like

Leave a Comment