Bantwal murder: ಮಂಗಳೂರು:ಗಾಂಜಾ ವಹಿವಾಟಿನಲ್ಲಿ ತೊಡಗಿಸಿಕೊಂಡು ಪೊಲೀಸರ ನೋಟೆಡ್ ಲಿಸ್ಟನಲ್ಲಿದ್ದ ಯುವಕನೋರ್ವನನ್ನು ಅಪಹರಿಸಿ ಕೊಂದು ಬಳಿಕ ಶವದ ಗುರುತು ಪತ್ತೆಯಾಗದಂತೆ ಸುಟ್ಟ ಪ್ರಕರಣವೊಂದು ಶೀಘ್ರ ಬಯಲಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಸುಟ್ಟ ಶವ ಬಂಟ್ವಾಳದ ಯುವಕನದ್ದು ಎನ್ನುವ ಗುರುತು ಸಿಗುತ್ತಿದ್ದಂತೆ ಪೊಲೀಸರ ತನಿಖೆಯ ಗತಿ ಬದಲಾಗಿದ್ದು, ತೀವ್ರ ತನಿಖೆಯೊಂದಿಗೆ ವೇಗ ಪಡೆದುಕೊಂಡಿದೆ.

ಕಳೆದ ಕೆಲ ದಿನಗಳ ಹಿಂದೆ ಬಂಟ್ವಾಳ (Bantwal murder) ತಾಲೂಕಿನ ಇರಾ ಗ್ರಾಮದ ಅಬ್ಬಾಸ್ ಎಂಬವರ ಪುತ್ರ ಫವಾಸ್ ಎಂಬಾತನ ಅಪಹರಣವಾಗಿತ್ತು.ಹಲವು ಸಮಯಗಳಿಂದ ಬಂಟ್ವಾಳ, ಮಂಗಳೂರು ಠಾಣಾ ವ್ಯಾಪ್ತಿಯಲ್ಲಿ ಮಾದಕ ವ್ಯಸನ,ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಪೊಲೀಸರಿಗೆ ನೋಟೆಡ್ ಆಗುತ್ತಿದ್ದಂತೆ ಮನೆಗೆ ಅಪರೂಪವಾಗಿದ್ದ. ಕೊನೆಕೊನೆಗೆ ಊರಿಗೇ ಅಪರೂಪವಾಗಿ ಹೋಗಿದ್ದ. ಹಾಗೆ ಕಣ್ಣಂಚಿನಿಂದ ಮರೆಯಾದವನು ಈಗ ಈ ಲೋಕದಿಂದಲೇ ನಿರ್ಗಮಿಸಿದ್ದಾನೆ.
ಅಪಹರಣದ ಬಗ್ಗೆ ದೂರು ಬಂದ ಬೆನ್ನಲ್ಲೇ ಪೊಲೀಸ್ ಮೂಲಗಳಿಗೆ ಗಾಂಜಾ ವಹಿವಾಟಿನ ಬಗ್ಗೆ ಅನುಮಾನ ಮೂಡಿದ್ದು, ಗಾಂಜಾ ಮಾರಾಟ, ವ್ಯವಹಾರದ ವಿಚಾರದಲ್ಲಿ ಅಪಹರಣವಾಗಿರಬಹುದು ಎಂದು ಅನುಮಾನಿಸಲಾಗಿತ್ತು. ಹೀಗೆ ಆತನ ಪತ್ತೆಗೆ ಹೊರಟ ಪೊಲೀಸರಿಗೆ ಬಣಕಲ್ ಗುಡ್ಡದಲ್ಲಿ ಪತ್ತೆಯಾದ ಅರೆಬರೆ ಸುಟ್ಟ ಶವ ಮತ್ತೂ ಅನುಮಾನ ಹೆಚ್ಚಿಸಿದ್ದು,ವೈದ್ಯಕೀಯ ವರದಿ ಹಾಗೂ ತನಿಖೆಯಲ್ಲಿ ಶವ ಆತನದ್ದೇ ಎನ್ನುವ ವಿಚಾರ ಬಯಲಾಗುತ್ತಿದ್ದಂತೆ ಅಪಹರಣಗೈದು ಕೊಲೆ ನಡೆಸಿದ್ದಾರೆ ಎನ್ನುವುದು ಖಚಿತವಾಗಿದೆ.
ಕೂಡಲೇ ಪೊಲೀಸರ ತಂಡ ಸ್ಥಳೀಯವಾಗಿ ಕುರುಹು ಪತ್ತೆಗೆ ತನಿಖೆ ನಡೆಸಿದ್ದು, ಸುಟ್ಟ ಶವದ ಬಣಕಲ್ ನಲ್ಲಿದ್ದರೂ, ಆ ಕೃತ್ಯ ನಡೆದ ವಾಸನೆ ಬಂಟ್ವಾಳ ತಾಲೂಕಿನ. ಎರಡು ಗ್ರಾಮಗಳಿಂದ. ಬಂದಿತ್ತು. ಕೊಲೆಗಡುಕರು ಬಂಟ್ವಾಳ ತಾಲೂಕಿನವರೇ ಇರಬಹುದು ಎಂದು ಬಲವಾಗಿ ಅನುಮಾನಿಸಲಾಗಿದೆ. ಅಲ್ಲದೇ ಕೊಲೆ ಆರೋಪಿಗಳಿಗಾಗಿ ಆತನ ಗೆಳೆಯರ ವಿಚಾರಣೆಗಿಳಿದ ಪೊಲೀಸರಿಗೆ ಈ ಹಿಂದೆ ಠಾಣಾ ವ್ಯಾಪ್ತಿಯಲ್ಲಿ ಮಾದಕ ವ್ಯಾಸನ, ಮಾರಾಟ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ವಗ್ಗ, ಕಾವಳಕಟ್ಟೆ ಮೂಲದ ಯುವಕರ ಬಗ್ಗೆ ಶಂಕೆ ಮೂಡಿದೆ.

ನಿನ್ನೆ ಮೃತನ ಮನೆಗೆ ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ, ತನಿಖಾ ದೃಷ್ಠಿಕೋನವೇ ಬದಲಾಗಿ ತನಿಖೆ ಚುರುಕುಗೊಂಡಿದೆ. ಶೀಘ್ರ ಕೊಲೆ ಆರೋಪಿಗಳ ಹೆಡೆಮುರಿಕಟ್ಟಲು ಪೊಲೀಸರ ತಂಡ ಬೆಲ್ಟು ಬೂಟು ಬಿಗಿ ಮಾಡಿಕೊಂಡು ಹೊರಟಿದ್ದಾರೆ. ಇಲಾಖೆ ಎಲ್ಲಾ ಆಯಾಮಗಳ ತನಿಖೆಗೆ ಮುಂದಾಗಿದೆ. ಕೆಲವೇ ಹೊತ್ತಲ್ಲಿ ಹೊಸ ಸುದ್ದಿ ಬರಲಿದೆ.
ಇದನ್ನೂ ಓದಿ: ಉಪ್ಪಿನಂಗಡಿ : ಮಂತ್ರವಾದಿಯಾದ ಕಡಬದ ಗುಜರಿ ವ್ಯಾಪಾರಿ , ನೂಲು ನೀಡಲು ಹೋದಾತನ ಶನಿ ಬಿಡಿಸಿದ ಸ್ಥಳೀಯರು
