Home » ಬಂಟ್ವಾಳ : ಎಲ್.ಟಿ‌.ಲೈನ್ ಮೇಲೆ ಬಿದ್ದ ಎಚ್.ಟಿ. ಲೈನ್ ,ಹಲವು ಮನೆಗಳ ವಯರಿಂಗ್,ವಿದ್ಯುತ್ ಪರಿಕರಗಳು ಭಸ್ಮ

ಬಂಟ್ವಾಳ : ಎಲ್.ಟಿ‌.ಲೈನ್ ಮೇಲೆ ಬಿದ್ದ ಎಚ್.ಟಿ. ಲೈನ್ ,ಹಲವು ಮನೆಗಳ ವಯರಿಂಗ್,ವಿದ್ಯುತ್ ಪರಿಕರಗಳು ಭಸ್ಮ

by Praveen Chennavara
0 comments

ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲದಲ್ಲಿ ಎಚ್.ಟಿ. ವಿದ್ಯುತ್ ಲೈನ್ ವೀಕ್ ಆಗಿ ತುಂಡಾಗಿ ಬಿದ್ದು ಹಲವು ಮನೆಗಳ ವಯರಿಂಗ್ ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ಎಚ್.ಟಿ.ಲೈನ್ ಎಲ್.ಟಿ.ಲೈನ್ ಮೇಲೆ ಬಿದ್ದು ಏಕಾಏಕಿ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಈ ಹಿಂದೆಯೂ ಇದೇ ಸಮಸ್ಯೆ ಇದ್ದು, ಸಂಬಂಧಪಟ್ಟ ಜೆಇ ಅವರ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಿಂದ ಸ್ಥಳೀಯ ನಿವಾಸಿಗಳಾದ ವಿನ್ಸೆಂಟ್ ಬ್ಯಾಪ್ಟಿಸ್ಟ್, ಗಿಲ್ಬರ್ಟ್ ಪಿಂಟೋ, ವಿಲಿಯಂ ಪಿಂಟೋ ಅವರ ಪಂಪುಸೆಟ್ ಗಳು ಸುಟ್ಟು ಹೋಗಿವೆ. ಜೈಸನ್ ಪಿಂಟೋ ಅವರ ಮನೆ ಸೇರಿದಂತೆ ಹಲವು ಮನೆಗಳ ವಿದ್ಯುತ್ ವಯರಿಂಗ್, ಸಲಕರಣೆಗಳು ಸಂಪೂರ್ಣ ಸುಟ್ಟಿವೆ. ವಯರಿಂಗ್ ದುರಸ್ತಿ ಮಾಡಿ ಕೊಡುವುದಾಗಿ ಮೆಸ್ಕಾಂನವರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

You may also like

Leave a Comment