Home » ಬಂಟ್ವಾಳ: ಸಿಡಿಲು ಬಡಿದು ಯುವಕ ದಾರುಣ ಸಾವು

ಬಂಟ್ವಾಳ: ಸಿಡಿಲು ಬಡಿದು ಯುವಕ ದಾರುಣ ಸಾವು

0 comments

ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ನಿನ್ನೆ ನಡೆದಿದೆ.

ಪಾಂಡವರಕಲ್ಲು ನಿವಾಸಿ ಲೋಕೇಶ್ ಎಂಬವರು ಮೃತ ವ್ಯಕ್ತಿ.

ಕೂಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಅವರು ನಿನ್ನೆ ರಜೆಯಲ್ಲಿದ್ದರು. ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದ ವೇಳೆ ಸುಮಾರು ಮೂರು ಗಂಟೆಯ ವೇಳೆ ಬಡಿದ ಸಿಡಲಿನ ಆಘಾತಕ್ಕೆ ಇವರು ಮೃತಪಟ್ಟದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

You may also like

Leave a Comment