Home » ಬಂಟ್ವಾಳ:ಮನೆಯಲ್ಲಿದ್ದ ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಲೂಟಿ!! ರಾತ್ರಿ ಹೊತ್ತು ಮನೆಗೆ ನುಗ್ಗಿದ ದರೋಡೆಕೋರರ ಕೃತ್ಯ-ಪ್ರಕರಣ ದಾಖಲು

ಬಂಟ್ವಾಳ:ಮನೆಯಲ್ಲಿದ್ದ ಒಂಟಿ ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಲೂಟಿ!! ರಾತ್ರಿ ಹೊತ್ತು ಮನೆಗೆ ನುಗ್ಗಿದ ದರೋಡೆಕೋರರ ಕೃತ್ಯ-ಪ್ರಕರಣ ದಾಖಲು

0 comments

ಮನೆ ಮಂದಿ ಸ್ಥಳೀಯ ದೇವಸ್ಥಾನವೊಂದರ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರ ತಂಡವೊಂದು ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಅಪಾರ ಪ್ರಮಾಣದ ಬೆಲೆ ಬಾಳುವ ವಸ್ತುಗಳನ್ನು ದೋಚಿದ ಪ್ರಕರಣವೊಂದು ಬಂಟ್ವಾಳ ತಾಲೂಕಿನ ಮಣಿನಾಲ್ಕುರು ತಾಂದಪಲ್ಕೆ ಎಂಬಲ್ಲಿ ನಡೆದಿದೆ.

ಸೇಸಪ್ಪ ನಾಯ್ಕ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿ ಬೆಂಡೋಲೆ, ಸರ ಹಾಗೂ ಕಾಪಾಟಿನಲ್ಲಿದ್ದ ಉಂಗುರ ಕರಿಮಣಿ ಯನ್ನು ಕದ್ದೋಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಾಗಿದೆ.

You may also like

Leave a Comment