Home » ಬೆಳ್ಳಾರೆ : ಝಕಾರಿಯ ಮಸೀದಿಯ ಕಬರ್ ಸ್ಥಾನದಲ್ಲಿ ಮಸೂದ್ ಅವರ ದಫನ್ | ಜನಸಾಗರದ ನಡುವೆ ಅಂತಿಮ ವಿಧಿ ವಿಧಾನ

ಬೆಳ್ಳಾರೆ : ಝಕಾರಿಯ ಮಸೀದಿಯ ಕಬರ್ ಸ್ಥಾನದಲ್ಲಿ ಮಸೂದ್ ಅವರ ದಫನ್ | ಜನಸಾಗರದ ನಡುವೆ ಅಂತಿಮ ವಿಧಿ ವಿಧಾನ

by Praveen Chennavara
0 comments

ಬೆಳ್ಳಾರೆ ಸಮೀಪದ ಕಳಂಜದಲ್ಲಿ ತಂಡದಿಂದ ಗಂಭೀರ ಹಲ್ಲೆಗೊಳಗಾಗಿ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಮಸೂದ್ ಅವರ ದಫನ್ ಬೆಳ್ಳಾರೆಯ ಝಕಾರಿಯಾ ಮಸೀದಿಯ ಕಬರ್ ಸ್ಥಾನದಲ್ಲಿ ತಡರಾತ್ರಿ 2 ಗಂಟೆಗೆ ನಡೆಯಿತು.

ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ರಾತ್ರಿ 11:30ಕ್ಕೆ ಪೋಸ್ಟ್ ಮಾರ್ಟಂ ಆದ ಬಳಿಕ ಮಂಗಳೂರಿನಲ್ಲಿ ಜನಜ ಸ್ನಾನ ಮುಗಿಸಿ ಬೆಳ್ಳಾರೆಗೆ ಆಂಬುಲೆನ್ಸ್ ಮೂಲಕ ಮೃತದೇಹವನ್ನು ತರಲಾಯಿತು.

ಮದ್ಯರಾತ್ರಿ ಘಂಟೆ 1.30 ಕ್ಕೆ ಸರಿಯಾಗಿ ಬೆಳ್ಳಾರೆಗೆ ಮೃತದೇಹ ತಲುಪಿದ್ದು,ಆ ಬಳಿಕ ಕಳಂಜ ನಿವಾಸಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು.

ನಂತರ ಕಳಂಜದಿಂದ ಮೃತದೇಹವನ್ನು ತಂದು ಸಾರ್ವಜನಿಕರಿಗೆ ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು

ಮಯ್ಯ ತ್ ನಮಾಝ್ ಬಳಿಕ 2.30 ರ ಸುಮಾರಿಗೆ ದಫನ ಕಾರ್ಯ ಮುಗಿಯಿತು.ಈ ಸಂಧರ್ಭದಲ್ಲಿ ಬೆಳ್ಳಾರೆ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಾವಿರಾರು ಮಂದಿ ಮಸೂದ್ ಅಂತ್ಯ ದರ್ಶನ ಪಡೆದರು.

You may also like

Leave a Comment