Home » Belthangadi | ಮಲೆಬೆಟ್ಟು ಬಳಿ ಭೀಕರ ರಸ್ತೆ ಅಪಘಾತ, ಹಿಟ್ ಆಂಡ್ ರನ್ ಅವಘಡ, ಮಂಗಳೂರಿಗೆ ದೌಡಾಯಿಸಿದ ಆಂಬುಲೆನ್ಸ್ !

Belthangadi | ಮಲೆಬೆಟ್ಟು ಬಳಿ ಭೀಕರ ರಸ್ತೆ ಅಪಘಾತ, ಹಿಟ್ ಆಂಡ್ ರನ್ ಅವಘಡ, ಮಂಗಳೂರಿಗೆ ದೌಡಾಯಿಸಿದ ಆಂಬುಲೆನ್ಸ್ !

0 comments

ಬೆಳ್ತಂಗಡಿ : ಇಬ್ಬರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಓರ್ವನ ಸ್ಥಿತಿ ಗಂಭೀರ ಆಗಿರುವ ಘಟನೆ ಇದೀಗ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲೆಬೆಟ್ಟು ನಿವಾಸಿಯಾಗಿರುವ ಧರ್ಮಪ್ಪ(42) ಹಾಗೂ ಅಜೀಜ್ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದರು. ಬೆಳ್ತಂಗಡಿಯಿಂದ ಮಲೆಬೆಟ್ಟು ಕಡೆಗೆ ಪ್ರಯಾಣಿಸುವ ವೇಳೆ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ.

ದ್ವಿಚಕ್ರ ವಾಹನವನ್ನು ಧರ್ಮಪ್ಪ ಇವರು ಚಲಾಯಿಸುತ್ತಿದ್ದ ಕಾರಣ ಅವರ ಬಲವಾದ ತಲೆಗೆ ಏಟು ಬಿದ್ದು ಸ್ಥಿತಿ ಗಂಭೀರವಾಗಿದೆ.
ಇವರನ್ನು ಬೆಳ್ತಂಗಡಿಯ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

You may also like

Leave a Comment