Home » Belthangadi: ಪಿಯುಸಿಯಲ್ಲಿ ಸಮಾನ ಮಾರ್ಕು: SDM ಕಾಲೇಜಿನ ಈ ಅವಳಿ ಜವಳಿ ಸೋದರಿಯರ ಮಾರ್ಕು ಕೂಡಾ ಅವಳಿ ಜವಳಿ !

Belthangadi: ಪಿಯುಸಿಯಲ್ಲಿ ಸಮಾನ ಮಾರ್ಕು: SDM ಕಾಲೇಜಿನ ಈ ಅವಳಿ ಜವಳಿ ಸೋದರಿಯರ ಮಾರ್ಕು ಕೂಡಾ ಅವಳಿ ಜವಳಿ !

1 comment
Belthangadi

Belthangadi Twin sisters : ಅವಳಿ ಜವಳಿ ಮಕ್ಕಳು ನೋಡಲು ಒಂದೇ ಥರನಾಗಿರುತ್ತಾರೆ, ಅವರ ಸ್ವಭಾವದಲ್ಲಿ ಕೂಡಾ ಸಾಮ್ಯತೆ ಇರುತ್ತೆ ಅನ್ನೋದನ್ನು ನಾವು ಕೇಳಿ, ಓದಿ, ಕೆಲಬಾರಿ ಗಮನಿಸಿ ತಿಳಿದಿದ್ದೇವೆ. ಆದರೆ ಆ ಇಬ್ರೂ ಅವಳಿ ಜವಳಿಗಳು ಪರೀಕ್ಷೆಯಲ್ಲೂ ಒಂದೇ ರೀತಿಯ ಮಾರ್ಕು ಪಡೀತಾರೆ ಅಂದ್ರೆ ನಂಬಲಿಕ್ಕಾಗುತ್ತಾ? ಹೌದು, ನೀವು ನಂಬಲೇ ಬೇಕು. ಈಗ ನಾವು ಹೇಳುತ್ತಿರುವ ಅವಳಿ ಜವಳಿ ಹುಡುಗಿಯರು(Belthangadi Twin sisters )ಪಿಯುಸಿ ಪರೀಕ್ಷೆಯಲ್ಲಿ ಇಬ್ರೂ ಒಂದೇ ಪ್ರಮಾಣದ ಅಂಕವನ್ನು ಪಡೆದು ಆಶ್ಚರ್ಯ ಮೂಡಿಸಿದ್ದಾರೆ.

ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಪುಣ್ಕೆದಡಿ ಶ್ರೀ ಹೊನ್ನಪ್ಪ ಗೌಡ ಮತ್ತು ಗಿರಿಜಾ ಇವರ ಮೊಮ್ಮಕ್ಕಳಾದ, ನೆರಿಯ ಶ್ರೀ ಉಮೇಶ್ ಗೌಡ ಪಿ ಹೆಚ್- ‌ಮತ್ತು ಶ್ರೀಮತಿ ಗೀತಾ ದಂಪತಿಗಳ ಅವಳಿ ಮಕ್ಕಳಾದ ಕುಮಾರಿ ಸ್ಪಂದನಾ ಮತ್ತು ಕುಮಾರಿ ಸ್ಪರ್ಷಾರೇ ಈ ಸಾಧನೆ ಮಾಡಿದ ಹುಡುಗಿಯರು.

ಕುಮಾರಿ ಸ್ಪಂದನಾ ಮತ್ತು ಕುಮಾರಿ ಸ್ಪರ್ಷಾ ಇಬ್ಬರೂ ವಾಣಿಜ್ಯ ವಿಭಾಗದಲ್ಲಿ SDM ಕಾಲೇಜು ಉಜಿರೆಯಲ್ಲಿ ಓದುತ್ತಿದ್ದರು. ಇವರು ಇಬ್ಬರೂ ಒಟ್ಟಿಗೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ನಿನ್ನೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶ ನೋಡಿದ ಮಕ್ಕಳಿಗೆ ಆಶ್ಚರ್ಯ. ತಾವು ಮಾತ್ರ ಅವಳಿ ಜವಳಿಗಳಲ್ಲ, ತಮ್ಮ ಮಾರ್ಕುಗಳೂ ಅವಳಿ ಜವಳಿ ಆಗಿವೆ ಎಂದು ತಿಳಿದು ಆ ಹೆಣ್ಣುಮಕ್ಕಳು ಮತ್ತವರ ಪೋಷಕರು ಪುಳಕಿತರಾಗಿದ್ದಾರೆ.

Belthangadi

ಆ ಇಬ್ಬರೂ 99% ಶೇಕಡಾ ಮಾರ್ಕು ಪಡೆದಿದ್ದು, ಇಬ್ಬರೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ರಲ್ಲಿ 594 ಸಮಾನ ಅಂಕ ಪಡೆದಿರುವುದು ಒಂದು ವಿಶೇಷವಾಗಿರುತ್ತದೆ. ತಮ್ಮ ದೈಹಿಕ ಅವಳಿ ಜವಳಿ ತರದ ಜೊತೆಗೆ ಸಾಂದರ್ಭಿಕವಾಗಿ ಜೀವನದ ಪ್ರಮುಖ ಘಟ್ಟವಾದ ಪಿಯುಸಿಯಲ್ಲಿ ಸಮಾನ ಮಾರ್ಕು ಗಳಿಸಿ ರಿಸಲ್ಟ್ ಕೂಡಾ ಅವಳಿ ಜವಳಿತನ ಪ್ರದರ್ಶಿಸಿದೆ.

 

ಇದನ್ನೂ ಓದಿ : ಬಂಧು ಮಿತ್ರರಿಂದ ಅಪರೂಪದ ಆಮಂತ್ರಣ ದೊರಕಲಿದೆ ಈ ರಾಶಿಯವರಿಗೆ!!!

You may also like

Leave a Comment