Home » ಬೆಳ್ತಂಗಡಿ: ಇತ್ತೀಚೆಗೆ ದಶಮಾನೋತ್ಸವ ಕಂಡ ದೈವಸ್ಥಾನದ ಮೇಲೆ ಬಿತ್ತು ಅಧಿಕಾರಿಗಳ ಕೆಟ್ಟ ಕಣ್ಣು!! ಕಾರಣವಿಲ್ಲದೆ ಅಧಿಕಾರ ಚಲಾಯಿಸಿಸಲು ಮುಂದಾಯಿತಾ ಇಲಾಖೆ!!?

ಬೆಳ್ತಂಗಡಿ: ಇತ್ತೀಚೆಗೆ ದಶಮಾನೋತ್ಸವ ಕಂಡ ದೈವಸ್ಥಾನದ ಮೇಲೆ ಬಿತ್ತು ಅಧಿಕಾರಿಗಳ ಕೆಟ್ಟ ಕಣ್ಣು!! ಕಾರಣವಿಲ್ಲದೆ ಅಧಿಕಾರ ಚಲಾಯಿಸಿಸಲು ಮುಂದಾಯಿತಾ ಇಲಾಖೆ!!?

0 comments

ಕರಾವಳಿಯ ಜನರು ದೈವ ದೇವರಿಗೆ ವಿಶೇಷವಾದ ಪ್ರಾಶಸ್ತ್ಯ ನೀಡಿ, ಅನಾದಿಕಾಲದಿಂದಲೂ ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬಂದಿದ್ದಾರೆ. ಹಾಗೆಯೇ ಇಲ್ಲಿನ ದೈವ ದೇವರಿಗೆ ಕಾರ್ಣಿಕವಾದ ಶಕ್ತಿಯಿದೆ. ಆದರೆ ಇಂತಹ ಶಕ್ತಿಯನ್ನು ಕಡೆಗಣಿಸುವ ಕೆಲಸ ಮತ್ತೊಮ್ಮೆ ತುಳುನಾಡಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸುತ್ತಮುತ್ತಲಿನ ಗಿರಿಜನರು ಆರಾಧಿಸಿಕೊಂಡು ಬರುತ್ತಿದ್ದ ಮಹಾಮಾಯಿ ಹಾಗೂ ಬೈರವ ದೈವದ ಗುಡಿಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಯಾವುದೇ ಪೂರ್ವ ಸೂಚನೆ ನೀಡಿದೆಯೇ ತೆರವುಗೊಳಿಸಿರುವ ಘಟನೆ ಬೆಳ್ತಂಗಡಿಯ ಉರುವಾಲು ಪದವು ಎಂಬಲ್ಲಿ ನಡೆದಿದೆ.

ಕಳೆದ 10 ವರ್ಷಗಳಿಂದ ಸಣ್ಣ ಗುಡಿಯಲ್ಲಿ ಪೂಜಾ ಕಾರ್ಯ ನಡೆಸಲಾಗುತ್ತಿತ್ತು. ಹಾಗೆಯೇ ಈ ಗುಡಿಯನ್ನು ಇತ್ತೀಚೆಗೆ ದಶಮಾನೋತ್ಸವದ ಕಾರ್ಯಕ್ರಮ ನಡೆಸುವ ಸಲುವಾಗಿ ನವೀಕರಣಗೊಳಿಸಲಾಗಿತ್ತು. ಇದರ ಬಗ್ಗೆ ಮೌಖಿಕ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಇಲಾಖಾ ಹಾಗೂ ಗೇರು ಅಭಿವೃದ್ಧಿ ನಿಗಮದ ಸಿಬ್ಬಂದಿ ಯಾವುದೇ ಲಿಖಿತ ಸೂಚನೆ ನೀಡದೆ ಗುಡಿಯನ್ನು ತೆರವುಗೊಳಿಸಿದ್ದಾರೆ ಎಂದು ಗಿರಿಜನ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ.

ಅರಣ್ಯ ಇಲಾಖೆಯ ಈ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಸಮಸ್ಯೆ ಹೇಗೆ ಪರಿಹಾರವಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

You may also like

Leave a Comment