Home » Belthangady News: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಮೂವರು ಸ್ಥಳದಲ್ಲೇ ಸಾವು!!!

Belthangady News: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಮೂವರು ಸ್ಥಳದಲ್ಲೇ ಸಾವು!!!

0 comments

Mangaluru: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಡುಮದ್ದು ಘಟಕದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ ಮೂವರು ಛಿದ್ರ ಛಿದ್ರಗೊಂಡಿದ್ದಾರೆ.

ಈ ತೀವ್ರವಾದ ಸ್ಫೋಟದಲ್ಲಿ ತ್ರಿಶೂರಿನ ವರ್ಗೀಸ್‌, ಹಾಸನದ ಚೇತನ್‌, ಕೇರಳದ ಸ್ವಾಮಿ ಮೃತ ಹೊಂದಿದ್ದಾರೆ. ಕುಚ್ಚೋಡಿ ಸಮೀಪದ ನಿವಾಸಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ದಿನೇಶ್‌ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ ಕೇರಳ, ಕೇಶವ ಕೇರಳ ಇಲ್ಲಿ ಕೆಲಸ ಮಾಡುತ್ತಿದ್ದರು.

ಶೆಡ್‌ ಸಂಪೂರ್ಣ ಧ್ವಂಸ ಗೊಂಡಿದ್ದು, ಇದರ ಸದ್ದು ನಾಲ್ಕು ಕಿ.ಮೀ ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ: Belthangady: ಗೋಳಿಯಂಗಡಿ ಬಳಿ ಭೀಕರ ಸ್ಫೋಟ!!! ಹಲವರಿಗೆ ಗಂಭೀರ ಗಾಯ, ಸ್ಫೋಟದ ತೀವ್ರತೆಗೆ ಬೆಚ್ಚಿಬಿದ್ದ ಜನತೆ!!

You may also like

Leave a Comment