Home » ಬೆಳ್ತಂಗಡಿ : ಟ್ರಾಫಿಕ್ ಜಾಮ್ ತಿಳಿಗೊಳಿಸುತ್ತಿದ್ದ ಉಜಿರೆ ಆಟೋ ಚಾಲಕರ ಮೇಲೆ ಹಲ್ಲೆ

ಬೆಳ್ತಂಗಡಿ : ಟ್ರಾಫಿಕ್ ಜಾಮ್ ತಿಳಿಗೊಳಿಸುತ್ತಿದ್ದ ಉಜಿರೆ ಆಟೋ ಚಾಲಕರ ಮೇಲೆ ಹಲ್ಲೆ

0 comments

ಬೆಳ್ತಂಗಡಿ : ಅತಿಯಾದ ಮಳೆಯಿಂದಾಗಿ ಇಂದು ಮುಂಜಾನೆ ಉಜಿರೆ ಜನಾರ್ಧಸ್ವಾಮಿ ದ್ವಾರದ ಎದುರು ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದನ್ನು ತಿಳಿಗೊಳಿಸಲು ಹೋದ ಸುರ್ಯ ರಿಕ್ಷ ಪಾರ್ಕಿಂಗ್ ಚಾಲಕರ ಮೇಲೆ ಹಲ್ಲೆಯಾದ ಘಟನೆ ಉಜಿರೆಯ ಜನಾರ್ದನ ದೇವಸ್ಥಾನದ ದ್ವಾರದ ಬಳಿ ನಡೆದಿದೆ.

ಉಜಿರೆ ಟಿಬಿ ಕ್ರಾಸಿನ ಉಮಾರ್ ಎಂಬ ವ್ಯಕ್ತಿಯು ರಿಕ್ಷದಲ್ಲಿ ಏಕಾಏಕಿ ಬಂದು ದಾಳಿ ನಡೆಸಿದ ಘಟನೆ ಉಜಿರೆಯಲ್ಲಿ ಬೆಳಗ್ಗೆ ನಡೆದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಎರಡು ಮೂರು ರಿಕ್ಷಾ ಚಾಲಕರಿಗೆ ಏಕಾಏಕಿ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಕಾರಣ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ

You may also like

Leave a Comment