Home » ಮಂಗಳೂರು : ಅನಾರೋಗ್ಯದ ಕಾರಣದಿಂದ ಸಾವು ಕಂಡ ಅಂತಾರಾಷ್ಟ್ರೀಯ ಬೈಕರ್!!!

ಮಂಗಳೂರು : ಅನಾರೋಗ್ಯದ ಕಾರಣದಿಂದ ಸಾವು ಕಂಡ ಅಂತಾರಾಷ್ಟ್ರೀಯ ಬೈಕರ್!!!

0 comments

ಉಳ್ಳಾಲ : ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನ ಅಳೇಕಲದ ಜಾರ ಹೌಸ್ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಜಳ್ (31) ಅವರು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ‌.

ಅವಿವಾಹಿತರಾಗಿದ್ದ ಇವರಿಗೆ ಕೆಲವು ತಿಂಗಳ ಹಿಂದೆ ಅನಾರೋಗ್ಯ ಕಾಡಿತ್ತು. ಹಾಗಾಗಿ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ದಿನಪತ್ರಿಕೆಯಲ್ಲಿ ಉದ್ಯೋಗಿಯಾಗಿದ್ದ ಇವರು, ನಂತರ ವಿದೇಶಕ್ಕೆ ಹೋಗಿ ಅಲ್ಲಿ ಉದ್ಯೋಗದಲ್ಲಿದ್ದರು. ಆದರೆ ಕೊರೊನಾ ಎಲ್ಲಾ ಮುಗಿದ ಬಳಿಕ ಊರಿಗೆ ಬಂದು, ತನ್ನ ಇಷ್ಟದ ಹವ್ಯಾಸಿ ಬೈಕ್ ಪ್ರಯಾಣ ಮುಂದುವರಿಸಿದ್ದರು. ದೇಶ, ವಿದೇಶಗಳಿಗೆ ಬುಲೆಟ್‌ನಲ್ಲೇ ಸಾವಿರಾರು ಕಿ.ಮೀ. ಏಕಾಂಗಿಯಾಗಿ ಸಂಚರಿಸಿ ಗಮನ ಸೆಳೆದಿದ್ದರು. ಮಂಗಳೂರು ಬುಲ್ಸ್ ಕ್ಲಬ್ ಸದಸ್ಯರಾಗಿದ್ದ ಸಯ್ಯದ್ ಮುಹಮ್ಮದ್ ಸಲೀಂ ತಂಞಳ್ 39 ದಿನಗಳಲ್ಲಿ ಭಾರತ ಸೇರಿ ಬಾಂಗ್ಲಾದೇಶ, ನೇಪಾಳ, ಬೂತಾನ್ ಒಟ್ಟು ಮೂರು ದೇಶಗಳಿಗೆ 12,635 ಕಿ.ಮೀ ಬೈಕ್ ಪ್ರಯಾಣದ ಮೂಲಕ ದಾಖಲೆ ಸೃಷ್ಟಿಸಿದವರು.

29 ರ ಹರೆಯದಲ್ಲೇ ಬೈಕ್ ರೈಡ್ ಹವ್ಯಾಸ ಬೆಳೆಸಿಕೊಂಡಿದ್ದ ಸಲೀಂ, 2020 ರ ಜ.8 ರಂದು ಪ್ರಯಾಣ ಮಂಗಳೂರಿನಿಂದ ಬೆಳೆಸಿ ಫೆ.15 ರಂದು ವಾಪಸ್ಸಾಗಿದ್ದರು.

2018 ರಲ್ಲಿ 38 ಗಂಟೆಗಳ ಮಂಗಳೂರು ಟು ಮುಂಬೈ, 2210 ಕಿ.ಮೀ ಹಾಗೂ ಅದೆ ವರ್ಷದ ಆಗಸ್ಟ್ ನಲ್ಲಿ ಹೈದರಾಬಾದ್ ಗೆ ನಾಲ್ಕು ದಿನಗಳಲ್ಲಿ 2500 ಕಿ.ಮೀ
ಬೈಕಿನಲ್ಲಿ ಪ್ರಯಾಣ ನಡೆಸಿದ್ದರು.

You may also like

Leave a Comment