Home » Mangaluru: ಮಂಗಳೂರು: ಅಣ್ಣನ ಕೋಪದಲ್ಲಿ ಮನೆ ಶೋಕೇಸ್ ಒಡೆದು ರಕ್ತಸ್ರಾವದಿಂದ ಮೃತ್ಯು!

Mangaluru: ಮಂಗಳೂರು: ಅಣ್ಣನ ಕೋಪದಲ್ಲಿ ಮನೆ ಶೋಕೇಸ್ ಒಡೆದು ರಕ್ತಸ್ರಾವದಿಂದ ಮೃತ್ಯು!

0 comments
Death News

Mangaluru: ಶರಾಬಿನ ಮತ್ತಿನಲ್ಲಿ

ಸಹೋದರನೊಡನೆ ಜಗಳವಾಡಿ ಮನೆಯಲ್ಲಿದ್ದ ಶೋಕೇಸನ್ನು ಬರಿ ಕೈಯಿಂದ ಒಡೆದು ಹಾಕಿ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಉಳ್ಳಾಲ ಸಮೀಪದ ಮದೂರು ಸೈಟ್‌ನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಮೃತನನ್ನು ಮದೂರು ಸೈಟ್ ನಿವಾಸಿ ಸತೀಶ್ ನಾಯಕ್ ಅವರ ಪುತ್ರ ನಿತೇಶ್‌ ನಾಯಕ್ (28) ಎಂದು ಗುರುತಿಸಲಾಗಿದೆ.

ನಿತೇಶ್ ತಂದೆ ಮತ್ತು ಸಹೋದರನೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು. ಗುರುವಾರ ರಾತ್ರಿ ಭಾರಿ ಸಿಟ್ಟಿನಲ್ಲಿದ್ದ ನಿತೇಶ್ ಮನೆಯೊಳಗಿದ್ದ ಶೋಕೇಸ್ ಗಾಜನ್ನು ಒಡೆದಿದ್ದಾನೆ ಎನ್ನಲಾಗಿದೆ. ಒಡೆದ ಗಾಜು ಅವನ ಕೈಯ ಪ್ರಮುಖ ನರಕ್ಕೆ ತಗುಲಿ ವಿಪರೀತ ರಕ್ತಸ್ರಾವವಾಗಿ ಸಾವು ಸಂಭವಿಸಿದೆ.

ಇದನ್ನೂ ಓದಿ: Mangaluru: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.12 ರಂದು ಲೋಕ ಅದಾಲತ್ ಕಾರ್ಯಕ್ರಮ!

You may also like