Home » Crime: ಬಿ.ಸಿ.ರೋಡ್: ಮೇಯಲು ಬಿಟ್ಟ ದನಗಳನ್ನು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ಕಟುಕರು: ಪ್ರಕರಣ ದಾಖಲು

Crime: ಬಿ.ಸಿ.ರೋಡ್: ಮೇಯಲು ಬಿಟ್ಟ ದನಗಳನ್ನು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ಕಟುಕರು: ಪ್ರಕರಣ ದಾಖಲು

0 comments
Crime News Bangalore

Crime: ಮೇಯಲು ಬಿಟ್ಟಿದ್ದ ದನಗಳನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ತುಂಬಿಸಿ ಕೊಂಡೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಅಮ್ಮುಂಜೆ ಗ್ರಾಮದ ಕಲಾಯಿ ಹೌಸ್ ಎಂಬಲ್ಲಿ ನಡೆದಿದೆ.

ಮಲ್ಲೂರು ಗ್ರಾಮದ ಘಟ್ಟಬೆಟ್ಟು ನಿವಾಸಿ ಜಗದೀಶ್ ಕುಲಾಲ್ ರವರಲ್ಲಿ 12 ದನಗಳಿದ್ದು ಜೂನ್ 28ರಂದು ಮೇಯಲು ಬಿಟ್ಟಿದ್ದು, ಇದರಲ್ಲಿ ಎರಡು ಗಂಡು ಕರುಗಳು ಕಾಣೆಯಾಗಿದೆ. ಈ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದ್ದು ಕಲಾಯಿ ಹೌಸ್ ಎಂಬಲ್ಲಿ ರಸ್ತೆ ಕಾಣುವಂತೆ ಸಿಸಿ ಕ್ಯಾಮರ ನೋಡಿದಾಗ ಜೂನ್ 29ರಂದು ಬೆಳಗ್ಗಿನ ಜಾವ ಸಮಯ ಸುಮಾರು 4.30 ಗಂಟೆಗೆ ಎರಡು ಗಂಡು ಕರುಗಳನ್ನು ಎರಡು ಜನ ವ್ಯಕ್ತಿಗಳು ರಿಡ್ಜ್ ಕಾರಿನಲ್ಲಿ ತುಂಬಿಸಿ ಹೋಗುವ ದೃಶ್ಯಾವಳಿಯು ಸೆರೆಯಾಗಿದೆ.

ಈ ಕುರಿತು ಮಾಲಕರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Kerala: ಕೇರಳದಲ್ಲಿ ಮತ್ತೆ ನಿಫಾ ಸೋಂಕು ಹವಾ!! 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಣೆ!

You may also like