Home » ತೊಕ್ಕೊಟ್ಟು : ಬ್ಯಾರಿಭವನ ಶಿಲಾನ್ಯಾಸಕ್ಕೆ ಬಿಜೆಪಿಗರಿಂದ ತೀವ್ರ ವಿರೋಧ| ಯು.ಟಿ.ಖಾದರ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ

ತೊಕ್ಕೊಟ್ಟು : ಬ್ಯಾರಿಭವನ ಶಿಲಾನ್ಯಾಸಕ್ಕೆ ಬಿಜೆಪಿಗರಿಂದ ತೀವ್ರ ವಿರೋಧ| ಯು.ಟಿ.ಖಾದರ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ

0 comments

ಮಂಗಳೂರು : ನಗರದ ಹೊರವಲಯದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ಬಿಜೆಪಿಯವರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಅಬ್ಬಕ್ಕ ಭವನ ವಿಳಂಬ ಕಾರಣ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಅಭಿಮಾನಿಗಳಿಂದ ಬ್ಯಾರಿಭವನ ಶಿಲಾನ್ಯಾಸಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಬಿಜೆಪಿ – ಹಿಂದೂ ಸಂಘಟನೆಯ ಕಾರ್ಯಕರ್ತರು ಶಿಲಾನ್ಯಾಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆದಿದೆ. ಸ್ಥಳೀಯ ಶಾಸಕ ಯು ಟಿ ಖಾದರ್ ಹಾಗೂ ಪ್ರತಿಭಟನಕಾರರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಬಿಜೆಪಿ ಸರಕಾರ ಇರುವಾಗ ಬಿಜೆಪಿಯವರೇ ಪ್ರತಿಭಟಿಸುವುದು ಹಾಸ್ಯಾಸ್ಪದ‌. ಇದರ ಬದಲಿಗೆ ನಿಮ್ಮ ಸರಕಾರದ ಮೂಲಕ ಇದನ್ನು ನಿಲ್ಲಿಸಬಹುದಲ್ವಾ ? ಎಂದು ಯು ಟಿ ಖಾದರ್ ಹಂಗಿಸಿದ್ದಾರೆ‌. ಅಷ್ಟು ಮಾತ್ರವಲ್ಲದೇ ಈ ಶಿಲಾನ್ಯಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಗೈರಾಗಿದ್ದರು.

You may also like

Leave a Comment