Home » Mangaluru: ಪೆಟ್ರೋಲ್ ಪಂಪ್ ನಲ್ಲಿ ಹೊತ್ತಿ ಉರಿದ ಕಾರು

Mangaluru: ಪೆಟ್ರೋಲ್ ಪಂಪ್ ನಲ್ಲಿ ಹೊತ್ತಿ ಉರಿದ ಕಾರು

0 comments

Mangaluru : ಮಂಗಳೂರು ನಗರದ ಲೇಡಿಹಿಲ್ ನ ಪೆಟ್ರೋಲ್ ಪಂಪ್ ಎದುರು ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಕಾರು ದಗದಗಿಸಿ ಉರಿದಿದೆ. ಕೂಡಲೇ ಪೆಟ್ರೋಲ್ ಪಂಪ್ ಸಿಬಂದಿ ಬೆಂಕಿ ನಂದಿಸಿದ್ದಾರೆ.

ಹೌದು, ರವಿವಾರ ಅಪರಾಹ್ನ ಮಂಗಳೂರಿನಲ್ಲಿ(Mangaluru) ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಮುಂಭಾಗ ನಿಂತಿತು ಎಂದು ಕದ್ರಿ ಅಗ್ನಿಶಾಮಕ ಇಲಾಖೆಯವರು ತಿಳಿಸಿದ್ದಾರೆ. ಕೂಡಲೇ ಪೆಟ್ರೋಲ್ ಪಂಪ್ ಸಿಬಂದಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

You may also like

Leave a Comment