Home » ಚಾಕಲೇಟ್ ಗಂಟಲಲ್ಲಿ ಸಿಲುಕಿ 2ನೇ ತರಗತಿ ಬಾಲಕಿ ದಾರುಣ ಸಾವು!

ಚಾಕಲೇಟ್ ಗಂಟಲಲ್ಲಿ ಸಿಲುಕಿ 2ನೇ ತರಗತಿ ಬಾಲಕಿ ದಾರುಣ ಸಾವು!

0 comments

ಉಪ್ಪುಂದ: ಕವರ್ ಜೊತೆ ಚಾಕಲೇಟ್ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳವಾಡಿಯಲ್ಲಿ ಬುಧವಾರ ನಡೆದಿದೆ.

ಸಮನ್ವಿ ಮೃತ ಬಾಲಕಿ ಎಂದು ತಿಳಿದುಬಂದಿದೆ.

ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದ ಸಮನ್ವಿ ಮುಂಜಾನೆ ಶಾಲೆಗೆ ಹೊರಡುತ್ತಿರುವ ಸಮಯದಲ್ಲಿ ತುಂಬಾ ಹಠ ಮಾಡಿದ್ದರಿಂದ ಆಕೆಯನ್ನು ಸಮಧಾನಪಡಿಸಲು ಅಮ್ಮ ಚಾಕಲೇಟ್ ನೀಡಿದ್ದಾರೆ. ಅಷ್ಟರಲ್ಲಿ ಶಾಲಾ ವಾಹನ ಬಂದಿದೆ. ವಿದ್ಯಾರ್ಥಿನಿ ಗಡಿಬಿಡಿಯಲ್ಲಿ ಕವರ್ ಸಹಿತ ಚಾಕಲೇಟ್ ನುಂಗಿದ್ದಾಳೆ. ಆದರೆ ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು, ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment