Home » ಕರಾವಳಿಗರೇ ಎಚ್ಚರ!! ಕಳ್ಳ ನೋಟು ದಂಧೆ ಬೆಳಕಿಗೆ-ಪೊಲೀಸರ ಕಾರ್ಯಾಚರಣೆಯಿಂದ ಇಬ್ಬರು ಬಲೆಗೆ-ಜಾಲ ಜಾಲಾಡಲು ಕಸ್ಟಡಿಗೆ!!

ಕರಾವಳಿಗರೇ ಎಚ್ಚರ!! ಕಳ್ಳ ನೋಟು ದಂಧೆ ಬೆಳಕಿಗೆ-ಪೊಲೀಸರ ಕಾರ್ಯಾಚರಣೆಯಿಂದ ಇಬ್ಬರು ಬಲೆಗೆ-ಜಾಲ ಜಾಲಾಡಲು ಕಸ್ಟಡಿಗೆ!!

0 comments

ಮಂಗಳೂರು: ಐನೂರು ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮಂಗಳೂರಿನಲ್ಲಿ ಚಲಾವನೆ ನಡೆಸಲು ಮುಂದಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಬಿಸಿ ರೋಡ್ ನಿವಾಸಿ ನಿಜಾಮುದ್ದೀನ್ ಯಾನೆ ನಿಜಾಂ ಹಾಗೂ ಜೆಪ್ಪು ನಿವಾಸಿ ರಜೇಮ್ ಎಂದು ಗುರುತಿಸಲಾಗಿದ್ದು, ಇವರಿಬ್ಬರು ಸೇರಿಕೊಂಡು ಬೆಂಗಳೂರು ಮೂಲದ ವ್ಯಕ್ತಿಯೊಬ್ಬನಿಂದ ಖೋಟಾ ನೋಟುಗಳನ್ನು ಪಡೆದು ಮಂಗಳೂರು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಚಲಾವನೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಆರೋಪಿಗಳು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ನಂತೂರು ಬಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಖೋಟಾ ನೋಟುಗಳ ವಿಚಾರ ಬಯಲಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಬೃಹತ್ ಜಾಲವನ್ನು ಜಾಲಾಡಿದ ಬಳಿಕ ಹೆಚ್ಚಿನ ಮಾಹಿತಿ ಹೊರಬರಲಿದೆ.

You may also like

Leave a Comment