Home » Dakshina Kannada: ಧರ್ಮಸ್ಥಳ, ಕುಕ್ಕೆಯಲ್ಲಿ ಮಹಿಳೆಯರ ದಂಡು! ಬಸ್ಸೇರಲು ಹರಸಾಹಸದ ಪ್ರಯತ್ನ!

Dakshina Kannada: ಧರ್ಮಸ್ಥಳ, ಕುಕ್ಕೆಯಲ್ಲಿ ಮಹಿಳೆಯರ ದಂಡು! ಬಸ್ಸೇರಲು ಹರಸಾಹಸದ ಪ್ರಯತ್ನ!

by Mallika
0 comments
Women crowd in Temple

Women crowd in Temple: ಕರ್ನಾಟಕ ಸರಕಾರದ ಶಕ್ತಿ ಯೋಜನೆಯ ಭರಪೂರ ಪ್ರಯೋಜನದಿಂದಾಗಿ ಮಹಿಳೆಯರು ತಂಡೋಪತಂಡವಾಗಿ ಪುಣ್ಯಕ್ಷೇತ್ರಗಳಿಗೆ (Women crowd in Temple) ಆಗಮಿಸುತ್ತಿದ್ದಾರೆ.

ಭಾನುವಾರ ಶನಿವಾರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ದಕ್ಷಿಣ ಕನ್ನಡ ಜಿಲ್ಲೆಯ ದರ್ಮಸ್ಥಳ, ಸೌತಡ್ಕ, ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಭೇಟಿ ಮಾಡಿ ದೇವರ ದರ್ಶನ ಪಡೆದಿದ್ದಾರೆ. ನಿಂತು ಕೊಂಡು ಬಂದರೂ ಮಹಿಳೆಯರ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಫ್ರೀ ಆದರೂ ಸೀಟು ಸಿಗದಿದ್ದರೂ, ಯಾರೂ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲ. ಹಾಗೆನೇ ಧರ್ಮಸ್ಥಳಕ್ಕೆಂದು ಬರುವವರು ಸುಬ್ರಹ್ಮಣ್ಯಕ್ಕೆ ಕೂಡಾ ಹೋಗುವುದು ಸಾಮಾನ್ಯ. ಹಾಗಾಗಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್‌ಗಳಂತೂ ಫುಲ್‌ ರಶ್‌. ಬಸ್ಸಿನೊಳಗೆ ಕಾಲಿಡಲು ಸಾಧ್ಯವಾಗದಷ್ಟು ಜನ ಇರುವುದು ಕಾಣುತ್ತಿತ್ತು.

ಬಸ್‌ನಲ್ಲಿ ಸೀಟ್‌ ಕಾದಿರಿಸಲು ಬ್ಯಾಗ್‌ಗಳನ್ನು ಬಸ್‌ನ ಕಿಟಕಿ ಮೂಲಕ ಎಸೆದು ಸೀಟ್‌ ಕಾಯ್ದಿರಿಸುವುದು ಸಾಮಾನ್ಯವಾಗಿ ಕಂಡು ಬಂದಿದೆ. ಆದರೆ ಮೊದಲೇ ಬಸ್ಸೇರಿದವರು ಸೀಟ್‌ನಲ್ಲಿದ್ದ ಬ್ಯಾಗ್‌ಗಳನ್ನೆಲ್ಲ ಪಕ್ಕಕ್ಕೆ ಸರಿಸಿ ತಾವು ಕುಳಿತುಕೊಳ್ಳುವುದು, ಇದು ಪ್ರಯಾಣಿಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಗಿದೆ. ಹಾಗಾಗಿ ನಿರ್ವಾಹಕರಿಗೆ ಈ ಸಮಸ್ಯೆಯನ್ನು ನಿಭಾಯಿಸುವುದು ಒಂದು ಹರಸಾಹಸವೇ ಆಗಿದೆ ಎಂದು ಹೇಳಬಹುದು. ಇಷ್ಟು ಮಾತ್ರವಲ್ಲದೇ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಬಟ್ಟೆಗಳನ್ನು ಒಣಗಿಸಲು ಬಸ್‌ಗಳನ್ನು ಬಳಸಿರುವ ದೃಶ್ಯ ಕೂಡಾ ಕಂಡು ಬಂದಿದೆ.

ಶಕ್ತಿ ಯೋಜನೆ ಜಾರಿ ಬಂದ ನಂತರ, ಬೆಂಗಳೂರಿನಿಂದ 70ವಿಶೇಷ ಬಸ್‌ಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಧರ್ಮಸ್ಥಳಕ್ಕೆ ಹೆಚ್ಚುವರಿ ಬಸ್‌ ಬಿಡಲಾಗಿದೆ. ಕೆಲವೊಂದು ಕಡೆ ಬಸ್‌ಗಳ ಕೊರತೆ ಇದ್ದರೆ, ಇನ್ನೊಂದು ಕಡೆ ಚಾಲಕ, ನಿರ್ವಾಹಕರ ಕೊರತೆ ಇದೆ. ಈ ಕಾರಣದಿಂದ ಹೆಚ್ಚುವರಿ ಬಸ್‌ ಬಿಡಲು ಸಮಸ್ಯೆಯಾಗುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್‌ ಬಗ್ಗೆ ಬೇಸರದ ಮಾತುಗಳನ್ನಾಡಿದ ಕೆ.ಎನ್‌.ರಾಜಣ್ಣ! ಕಾರಣವೇನು?

You may also like

Leave a Comment