Home » Kadaba: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Kadaba: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

by Praveen Chennavara
1 comment
Kadaba

 

ಕಡಬ: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಚಾರ್ವಾಕ ಎಂಬಲ್ಲಿ ನಡೆದಿದೆ. ಚಾರ್ವಾಕ ಗ್ರಾಮದ ಆತಾಜೆ ಮೇದಪ್ಪ ಗೌಡ (48)ಆತ್ಮಹತ್ಯೆ ಮಾಡಿಕೊಂಡವರು. ಘಟನೆ ಕುರಿತು

ಆತಾಜೆ ಬಾಲಕೃಷ್ಣ ಗೌಡ ಎಂಬವರ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಇದನ್ನೂ ಓದಿ: H D Devegowda: ಹಾಸನ ಲೋಕಸಭಾ ಅಭ್ಯರ್ಥಿ ಯಾರೆಂದು ಗುಟ್ಟು ಬಿಟ್ಟ ದೇವೇಗೌಡ್ರು- ಇವರೇ ನೋಡಿ JDS-BJP ಮೈತ್ರಿ ಅಭ್ಯರ್ಥಿ !!

ನನ್ನ ದೊಡ್ಡಪ್ಪನ ಮಗನಾದ ಮೇದಪ್ಪ ಗೌಡ ರವರು ತನ್ನ ಅಣ್ಣನ ಪತ್ನಿ ಯಶೋಧ ಮತ್ತು ಅವರು ಮಗಳು ರಾಶಿಯವರೊಂದಿಗೆ ವಾಸವಾಗಿರುತ್ತಾರೆ. ಜ ೧೭ರಂದು ರಂದು ಬೆಳಗ್ಗೆ ಮೇದಪ್ಪಗೌಡರವರ ಅಣ್ಣನ ಪತ್ನಿ ಯಶೋಧರವರು ಹೂ ಹೆಕ್ಕಲು ಹೋಗಿದ್ದು ಹೂ ಹೆಕ್ಕಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಮೇದಪ್ಪ ಗೌಡರವರು ಇಲ್ಲದೇ ಇದ್ದು ನಂತರ ಮೇದಪ್ಪ ಗೌಡರವರ ಮೊಬೈಲ್‌ಗೆ ಕರೆ ಮಾಡಿದಾಗ ಮೊಬೈಲ್ ಕರೆ ಸ್ವೀಕರಿಸದೇ ಇದ್ದಾಗ ಮನೆಯ ಸುತ್ತಮುತ್ತ ಹುಡುಕಾಡಿದಾಗ ಮೇದಪ್ಪ ಗೌಡರವರು ಮನೆಯ ಹತ್ತಿರ ಸುಮಾರು ೫೦ ಮೀಟರ್ ದೂರದಲ್ಲಿರುವ ಶೇಷಪ್ಪ ಗೌಡರವರ ಗೇರು ತೋಟದಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ದೂರಿನ ಮೇರೆಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ ೦೨/೨೦೨೪ ಕಲಂ:೧೭೪ ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

You may also like

Leave a Comment