Home » Puttur: ಬರೆಕೋಲಾಡಿಯಲ್ಲಿ ನಡೆದ ಹಲ್ಲೆಗೂ ರಾಮಮಂದಿರ ಅಕ್ಷತೆ ವಿಚಾರಕ್ಕೂ ಸಂಬಂಧವಿಲ್ಲ -ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ -ಎಸ್ಪಿ ಸ್ಪಷ್ಟನೆ

Puttur: ಬರೆಕೋಲಾಡಿಯಲ್ಲಿ ನಡೆದ ಹಲ್ಲೆಗೂ ರಾಮಮಂದಿರ ಅಕ್ಷತೆ ವಿಚಾರಕ್ಕೂ ಸಂಬಂಧವಿಲ್ಲ -ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ -ಎಸ್ಪಿ ಸ್ಪಷ್ಟನೆ

0 comments
Puttur

 

 

ಪುತ್ತೂರು: ರಾಮಮಂದಿರದ ಮಂತ್ರಾಕ್ಷತೆ ವಿತರಣೆ ಮಾಡುತ್ತಿದ್ದ ಹಿಂದೂ ಕಾರ್ಯಕರ್ತನ ಮೇಲೆ ಪುತ್ತಿಲ ಪರಿವಾರದ ಬೆಂಬಲಿಗರಿಂದ ಹಲ್ಲೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದ್ದು, ಈ ಹಲ್ಲೆ ಪ್ರಕರಣಕ್ಕೂ, ರಾಮಮಂದಿರದ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್‌ ಸ್ಪಷ್ಟನೆ ನೀಡಿದ್ದಾರೆ.

 

ಈ ಹಲ್ಲೆ ಪ್ರಕರಣಕ್ಕೆ ಹಾಗೂ ರಾಮ ಮಂದಿರದ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಮುಂಡೂರಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಅಕ್ಷತೆ ಹಂಚುವ ವಿಚಾರಕ್ಕೆ ನಡೆದ ಹಲ್ಲೆ ಅಲ್ಲ. ಪುತ್ತೂರು ತಾಲೂಕು ಮುಂಡೂರು ಗ್ರಾಮದ ಬರೆಕೊಲಾಡಿ ಎಂಬಲ್ಲಿ ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ಮನೆಯವರು ಜಗಳವಾಡಿಕೊಂಡು ಪರಸ್ಪರ ಹಲ್ಲೆ ನಡೆಸಿರುವುದಾಗಿದೆ ಎಂದು ಎಸ್ಪಿ ಪ್ರಕಡಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment