Home » ದ.ಕ: ದೈವದ ಆಜ್ಞೆಗೆ ತಲೆ ಬಾಗಿದ ಜನ; ಮಂಗಳೂರಿನ ಎಡಮಂಗಲದಲ್ಲಿ ಮತ್ತೆ ಸಂಭವಿಸಿದ ʼಕಾಂತಾರʼ ಸನ್ನಿವೇಶ!

ದ.ಕ: ದೈವದ ಆಜ್ಞೆಗೆ ತಲೆ ಬಾಗಿದ ಜನ; ಮಂಗಳೂರಿನ ಎಡಮಂಗಲದಲ್ಲಿ ಮತ್ತೆ ಸಂಭವಿಸಿದ ʼಕಾಂತಾರʼ ಸನ್ನಿವೇಶ!

0 comments

Dakshina Kannada: ತುಳುನಾಡಿನಲ್ಲಿ ದೈವದ ಕಥಾ ಹೊಂದಿರುವಂತಹ ಘಟನೆಯೊಂದನ್ನು ಘಟನೆಯನ್ನು ಈ ಸನ್ನಿವೇಶ ನೆನಪಿಸುತ್ತಿದೆ.

ಕಾಂತಾರ ಸಿನಿಮಾದಲ್ಲಿ ದೈವ ನರ್ತನ ಕಾರ್ಯವನ್ನು ತಂದೆಯ ಬಳಿಕ ಮಗ ಅಂದರೆ ರಿಷಬ್‌ ಶೆಟ್ಟಿ ಮುಂದುವರೆಸಿಕೊಂಡು ಹೋಗುವ ದೃಶ್ಯವಿದೆ. ಈ ಸಿನಿಮಾದಲ್ಲಿ ದೈವ ನರ್ತಕರಾಗುವುದಕ್ಕೆ ಮುನ್ನ ಏನು ನಡೆದಿದೆ? ದೈವ ನರ್ತನ ಮಾಡುವುದಕ್ಕೆ ಇರುವ ನಿಯಮವೇನು? ಇವೆಲ್ಲವನ್ನು ತೋರಿಸಲಾಗಿದೆ. ಇದೀಗ ಇದೇ ರೀತಿಯ ಘಟನೆ ನಿಜ ಜೀವನದಲ್ಲಿಯೂ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೇವಸ್ಥಾನದ ದೈವ ನರ್ತಕ ಕಾಂತು ಅಜಿಲರು, 2023 ಮಾರ್ಚ್‌ 30 ರಂದು ಅಕಾಲಿಕ ಮರಣ ಹೊಂದಿದ್ದರು. ದೈವ ನರ್ತನದ ವೇಳೆಯೇ ಅವರು ಕೆಳಗೆ ಬಿದ್ದು ಸಾವು ಕಂಡಿದ್ದರು.

ಕಾಂತು ಅಜಿಲ ಅವರ ಸಾವಿನ ನಂತರ ಹೊಸ ದೈವನರ್ತಕನ ಹುಡುಕಾಟ ನಡೆಸಲಾಗಿತ್ತು. ದೈವಜ್ಞರಿಂದ ಪ್ರಶ್ನಾಚಿಂತನೆಯಲ್ಲಿ ಕಾಂತು ಅಜಿಲ ಮಕ್ಕಳನ್ನೇ ಮುಂದಿನ ದೈವನರ್ತಕರಾಗಬೆಕು ಎಂಬ ಸೂಚನೆ ಕೂಡಾ ದೊರಕಿತ್ತು.

ಹಾಗಾಗಿ ಅಜಿಲರ ಮಕ್ಕಳಾದ ಮೋನಪ್ಪ, ದಿನೇಶ್‌ ಅವರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಕ ಮಾಡಲಾಗಿದೆ. ದೈವ ನರ್ತನದ ಜವಾಬ್ದಾರಿಯನ್ನು ಶಿರಾಡಿ ದೈವ ಕಾಂತು ಅಜಿಲರ ನಂತರ ಅವರ ಮಕ್ಕಳಿಗೆ ನೀಡಿದೆ.

You may also like

Leave a Comment