Home » Dakshina Kannada: ಖ್ಯಾತ ದೈವ ನರ್ತಕ ಅಶೋಕ್ ಬಂಗೇರ ಹೃದಯಾಘಾತದಿಂದ ಸಾವು!

Dakshina Kannada: ಖ್ಯಾತ ದೈವ ನರ್ತಕ ಅಶೋಕ್ ಬಂಗೇರ ಹೃದಯಾಘಾತದಿಂದ ಸಾವು!

0 comments

Dakshina Kannada: ಕೊರಗಜ್ಜ ದೈವಾರಧಕಾರಾದ ಅಶೋಕ್‌ ಬಂಗೇರ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಶುಕ್ರವಾರ ದೈವ ನರ್ತನ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸಾವಿಗೀಡಾಗಿದ್ದಾರೆ. ಮಂಗಳೂರಿನ ಪದವಿನಂಗಡಿಯಲ್ಲಿರವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ ಸೇವೆ ಮಾಡುತ್ತಿದ್ದರು.

ನಿನ್ನೆ ಹಳೆಯಂಗಡಿ ಸಮೀಪ ನಡೆದ ರಕ್ತೇಶ್ವರಿ ದೈವ ನೇಮದಲ್ಲಿ ದೈವ ನರ್ತನ ಮಾಡುತ್ತಿರುವಾಗ ಎದೆನೋವು ಕಾಣಿಸಿಕೊಂಡಿತ್ತು. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

You may also like

Leave a Comment