Home » Mangaluru: ಯುವಕ ದಿಢೀರ್‌ ಆತ್ಮಹತ್ಯೆ; ಕಾರಣ ನಿಗೂಢ

Mangaluru: ಯುವಕ ದಿಢೀರ್‌ ಆತ್ಮಹತ್ಯೆ; ಕಾರಣ ನಿಗೂಢ

0 comments

Mangaluru Ullala: ವ್ಯಕ್ತಿಯೋರ್ವ ದಿಢಿರ್‌ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಉಳ್ಳಾಲ ಠಾಣೆ ವ್ಯಾಪ್ತಿಯ ಕಲ್ಲಾಪು ಬಳಿಯ ಪಾರ್ದೆ ಕಟ್ಟೆ ಎಂಬಲ್ಲಿ ನಡೆದಿದೆ.

ತನ್ನ ಚಿಕ್ಕಮ್ಮನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಕಡೆ ಹಂಚಿದ್ದ ನಂದಕುಮಾರ್‌ (38) ಆತ್ಮಹತ್ಯೆಗೈದ ವ್ಯಕ್ತಿ. ಇವರು ತಂದೆ, ತಾಯಿಯನ್ನು ಅಗಲಿದ್ದು, ಸಮಾರಂಭಗಳಿಗೆ ಲೈಟಿಂಗ್‌, ಮೈಕ್‌ ಅಳವಡಿಸುವ ಎಲೆಕ್ಟ್ರೀಷಿಯನ್‌ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಇವರು ಬಾಡಿಗೆ ಮನೆಯಲ್ಲಿ ಕಳೆದ ಎಂಟು ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ. ಮಧ್ಯಾಹ್ನ ಮನೆಯ ಬಾಗಿಲು ತೆರೆದು ನೋಡಿದಾಗ ನಂದಕುಮಾರ್‌ ಕೊಠಡಿಯ ಛಾವಣಿಯ ಕಬ್ಬಿಣದ ಸಲಾಕೆಗೆ ಕೇಸರಿ ಶಾಲಿನಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.

ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲು ಮಾಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

 

You may also like

Leave a Comment