Home » Mangaluru ರೈಲು ಹತ್ತುವಾಗ ಕೆಳಗೆ ಬಿದ್ದ ಮಹಿಳೆ! ಮುಂದೇನಾಯ್ತು?

Mangaluru ರೈಲು ಹತ್ತುವಾಗ ಕೆಳಗೆ ಬಿದ್ದ ಮಹಿಳೆ! ಮುಂದೇನಾಯ್ತು?

by Mallika
1 comment
Mangalore

Mangalore: ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಬಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿಯನ್ನು ರೈಲ್ವೇ ರಕ್ಷಣ ದಳದವರು ರಕ್ಷಿಸಿದ್ದಾರೆ(Mangalore).

ಈ ಘಟನೆ ಮಂಗಳವಾರ ನಡೆದಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮಂಗಳೂರು ಸೆಂಟ್ರಲ್‌-ಚೆನ್ನೈ ಎಕ್ಸ್‌ಪ್ರೆಸ್‌ ರೈಲು (12602) ಪ್ಲಾಟ್‌ಫಾರಂ 1ರಿಂದ ಹೊರಡುವ ಸಮಯದಲ್ಲಿ ಕೊಯಮತ್ತೂರಿನ ಸೋಫಿಯಾ (50) ಎಂಬುವವರು ಹತ್ತಲು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಹತ್ತಲು ಸಾಧ್ಯವಾಗದೇ ಕೆಳಕ್ಕೆ ಬಿದ್ದಿದ್ದಾರೆ.

ಆಕೆಯ ಸಂಬಂಧಿ ಅಲ್ಲೇ ಇದ್ದು, ಆಕೆಯನ್ನು ರಕ್ಷಿಸಲು ಮುಂದೆ ಬಂದಿದ್ದಾರೆ. ಆದರೆ ಇಬ್ಬರೂ ನಿಯಂತ್ರಣ ಕಳೆದುಕೊಂಡು ಹಳಿ ಮತ್ತು ರೈಲಿನ ನಡುವೆ ಸಿಲುಕುವ ಅಪಾಯದಲ್ಲಿದ್ದರು.

ಕೂಡಲೇ ಆರ್‌ಪಿಎಫ್ ಸಿಬಂದಿ ಪಿ.ಬಿ.ಬಾಬುರಾಜನ್‌ ಅವರು ಅವರಿಬ್ಬರನ್ನು ಕೂಡಲೇ ಎಳೆದು ರಕ್ಷಣೆ ಮಾಡಿದ್ದಾರೆ. ಎರಡು ಮೊಣಕಾಲಿಗೆ ಗಾಯ ಉಂಟಾಗಿದ್ದು, ಮಹಿಳೆಗೆ ನಂತರ ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: Karnataka Govt Jobs 2023: ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕ! ಪಿಯುಸಿ ಪಾಸಾದವರಿಗೆ ಆದ್ಯತೆ!

You may also like

Leave a Comment