Belthangady: ಬೆಳ್ತಂಗಡಿ ತಾಲೂಕಿನಲ್ಲಿ ವ್ಯಕ್ತಿಯೋರ್ವರಿಗೆ ಹೈಟೆನ್ಶನ್ ವಯರ್ ತಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯೊಂದು ನಡೆದಿದೆ. ಮೃತಗೀಡಾದವರನ್ನು ಅಂಗಾರ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡುತ್ತಿದ್ದರೆಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಹೈ ಟೆನ್ಷನ್ ಲೈನ್ ಹಾದು ಹೋಗಿದ್ದು, ಇದನ್ನು ಗಮನಿಸಿದ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಅಲ್ಯುಮೀನಿಯಂ ಏಣಿ ತೆಗೆದುಕೊಂಡು ಹೋದ ಸಂದರ್ಭ ಈ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಏಣಿ HT ಲೈನಿಗೆ ತಗುಲಿದ್ದು, ಅಂಗಾರ ಅವರಿಗೆ ತೀವ್ರ ಕರೆಂಟ್ ಶಾಕ್ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೈ ಟೆನ್ಷನ್ ಲೈನಿನಲ್ಲಿ ಏನಾದರೋ ಕೆಲಸ ನಡೆಯುತ್ತಿತ್ತಾ ಎಂಬ ಬಗ್ಗೆ ಮಾಹಿತಿಯಿಲ್ಲ. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: Aruda Bharathi Swamiji: ಮುಸ್ಲಿಂ ಯುವತಿಯರನ್ನು ಲವ್ ಮಾಡಿ ಮತಾಂತರ ಮಾಡಬೇಕಾಗುತ್ತೆ: ಎಚ್ಚರಿಕೆ ನೀಡಿದ ಭಾರತೀ ಶ್ರೀ !
