Mangaluru Misbehave Case: ಮಂಗಳೂರು ನಗರದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಕೀಲೆ ಮುಫೀದಾ ರಹ್ಮಾನ್ ಎಂಬವರಿಗೆ ಮಾನಸಿಕ ಕಿರುಕುಳ (Mangaluru Misbehave Case)ನೀಡಿದ ಆರೋಪದ ಮೇಲೆ ಖಾಸಗಿ ಬಸ್ಸಿನ ನಿರ್ವಾಹಕ ಮತ್ತು ಚಾಲಕನನ್ನು(Private Bus Driver)ಶುಕ್ರವಾರ ಕದ್ರಿ ಪೊಲೀಸರು ಬಂಧಿಸಿದ್ದಾರೆ.
ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ವಕೀಲೆಯೊಬ್ಬರು ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ನತ್ತ ಪ್ರಯಾಣಿಸುವ 19 ನಂಬರಿನ ಖಾಸಗಿ ಬಸ್ಸಿಗೆ (Private Bus)ಹತ್ತುವ ವೇಳೆ ಚಾಲಕನು ಬೇಜವಾಬ್ದಾರಿ ಧೋರಣೆ ತೋರಿದ್ದು ಮಾತ್ರವಲ್ಲದೇ ಬಸ್ಸನ್ನು ಮುಂದಕ್ಕೆ ಚಲಾಯಿಸಿ ವಕೀಲೆಯ ಜೊತೆಗೆ ನಿರ್ವಾಹಕ ಅತಿರೇಕದಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿರುವ ಕುರಿತು ವಕೀಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹೀಗಾಗಿ, ಕದ್ರಿ ಪೊಲೀಸರು ಖಾಸಗಿ ಬಸ್ಸಿನ ನಿರ್ವಾಹಕ ಮತ್ತು ಚಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Hike bus ticket fare: ಬಸ್ ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್ – ಟಿಕೆಟ್ ದರದಲ್ಲಿ ದುಪ್ಪಟ್ಟು ಏರಿಕೆ !!
