Home » Mangalore: ಮೀನುಗಾರಿಕಾ ಬೋಟ್ ನಲ್ಲಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಅನಾಹುತ!

Mangalore: ಮೀನುಗಾರಿಕಾ ಬೋಟ್ ನಲ್ಲಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಅನಾಹುತ!

1 comment

Mangalore Boat Fire, Bunder: ಮೀನುಗಾರಿಕಾ ಬೋಟ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಗರದ ಮಂಗಳೂರಿನ ಹಳೆಬಂದರು (ದಕ್ಕೆ) ಬಳಿ ಬಂದರ್ ಬಳಿ(Mangalore Boat Fire) ಇಂದು ಮುಂಜಾನೆ (ಮಂಗಳವಾರ) ಸುಮಾರು 5 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲಂಗರು ಹಾಕಿದ್ದ ದೋಣಿಯಲ್ಲಿದ್ದ ಡೀಸೆಲ್ಗೆ ಬೆಂಕಿ ಆವರಿಸಿತ್ತು. ಆದರೆ ಹಗ್ಗ ಬಿಚ್ಚಿ ಬಿಟ್ಟ ಪರಿಣಾಮ ದೋಣಿ ಕೊಂಚ ದೂರದವರೆಗೆ ನೀರಿನಲ್ಲಿ ಸಾಗಿದೆ. ಇದರಿಂದಾಗಿ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದ್ದು, ಇತರ ದೋಣಿಗಳಿಗೆ ಬೆಂಕಿ ತಗುಲುವುದು ತಪ್ಪಿಸಿರುವ ಕುರಿತು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಪಾಂಡೇಶ್ವರ ಅಗ್ನಿಶಾಮಕ ದಳ ಮತ್ತು ಕದ್ರಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Radika Kumaraswamy brother Raviraj: ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ!

You may also like

Leave a Comment