Sowjanya murder case: ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೆ ( Sowjanya murder case)ನ್ಯಾಯ ಸಿಗಬೇಕೆಂದು ವಿಶ್ವ ಹಿಂದೂ ಪರಿಷತ್,ಭಜರಂಗದಳ ಧರ್ಮಸ್ಥಳದಲ್ಕಿ ಆಯೋಜಿಸಿರುವ ಪಾದಯಾತ್ರೆಯಲ್ಲಿ ಭಾರೀ ಜನಸ್ತೋಮವೇ ಸೇರಿದ್ದು ಸೌಜನ್ಯ ತಾಯಿ ಕುಸುಮಾವತಿ ಭಾಗವಹಿಸಿದ್ದಾರೆ.

ಈ ಹಿನ್ನಲೆಯಲ್ಲಿ ಸೌಜನ್ಯ ತಾಯಿಯವರು ಆರೋಪ ಮಾಡಿರುವ ಮೂವರು ಯುವಕರಾದ ಧೀರಜ್ ಕೆಲ್ಸ, ಮಲ್ಲಿಕ್ ಜೈನ್, ಉದಯ್ ರವರು ಪ್ರಮಾಣಕ್ಕೆ ಸಿದ್ಧ ಎಂದು ಹೇಳಿಕೆ ಕೊಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಆಣೆ ಪ್ರಮಾಣದ ಬದಲಾಗಿ ಅಣ್ಣಪ್ಪ ಸನ್ನಿಧಿಯಲ್ಲಿ ಮೂವರು ಪ್ರಾರ್ಥನೆ ಸಲ್ಲಿಸಿದರು. ನಾವು ಯಾವುದೇ ತಪ್ಪು ಮಾಡಿಲ್ಲ.ನಮ್ಮ ಮೇಲೆ ಆರೋಪ ಮಾಡುವವರಿಗೆ ದೇವರು ಸರಿಯಾದ ಶಿಕ್ಷೆ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಮೂವರೂ ಅಣ್ಣಪ್ಪ ಸ್ವಾಮಿಯ ಬೆಟ್ಟದ ಸಮೀಪ ಕಾಯುತ್ತಿರುತ್ತೇವೆ, ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಪ್ರಮಾಣ ಮಾಡಲು ಸಿದ್ಧ ಎಂಬ ವಾಟ್ಸಾಪ್ ಸಂದೇಶದ ರವಾನಿಸಿದ್ದರು.
ಅದರಂತೆ ಅವರು ಪ್ರಾರ್ಥನೆ ಸಲ್ಲಿಸಿದರು.
ಕುಸುಮಾವತಿ ಅವರು ಪಾದಯಾತ್ರೆಯಲ್ಲಿ ಮುಂಭಾಗದಲ್ಲಿ ಇದ್ದರು.ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಅತ್ತ ಕುಸುಮಾವತಿ ಅವರನ್ನು ಬರಲು ಬಿಡುವುದಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿರುವ ಮಹಿಳಾ ಮುಖಂಡರೂ ಸೇರಿದ್ದಾರೆ.ಅಲ್ಲದೇ ಧೀರಜ್ ಕೆಲ್ಲ,ಮಲ್ಲಿಕ್ ಜೈನ್,ಉದಯ ಅವರೂ ಸೇರಿದಂತೆ ಸಾವಿರಾರು ಜನರೂ ಜಮಾಯಿಸಿದ್ದಾರೆ.
ಸ್ಥಳದಲ್ಲಿ ಎಸ್ಪಿ ಸಿ.ಬಿ.ರಿಷ್ಯಂತ್ ಅವರೂ ಮೊಕ್ಕಾಂ ಹೂಡಿದ್ದು,ಭಾರೀ ಬಂದೋ ಬಸ್ತ್ ಮಾಡಲಾಗಿದೆ.
ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ವಾಹನವನ್ನು ಅಡ್ಡ ಇಡಲಾಗಿದ್ದು,ಅದನ್ನು ತೆಗೆಯುವಂತೆ ಆಗ್ರಹವ್ಯಕ್ತವಾಗಿದೆ.ಯಾವುದೇ ಘೋಷಣೆ ಕೂಗದಂತೆ ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Rain Alert: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಈ ದಿನದವರೆಗೆ ಭಾರೀ ಮಳೆಯಾಗಲಿದೆ ! ಹವಾಮಾನ ಇಲಾಖೆ ಮುನ್ಸೂಚನೆ !!!
