Kadaba: ಕೆಲಸಕ್ಕೆಂದು ಹೋಗಿ ಬರುವುದಾಗಿ ಮನೆಯಿಂದ ಹೋದ ಮಹಿಳೆ ನಾಪತ್ತೆಯಾಗಿರುವ ಕುರಿತು ಕಡಬ (kadaba) ಪೊಲೀಸ್ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಿಂದ ವರದಿಯಾಗಿದೆ.
ಕಡಬ ತಾಲೂಕು ಐತ್ತೂರು ಗ್ರಾಮದ ಓಟೆಕಜೆ ಸಿಆರ್‌ಸಿ ಕಾಲನಿ ನಿವಾಸಿ, ಬಿಳಿನೆಲೆಯ ರಬ್ಬರ್ ಸಂಸ್ಕರಣ ಘಟಕದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಶಿವಕುಮಾರ್ ಎಂಬವರ ಪತ್ನಿ ಮಂಜುಳಾ (35) ನಾಪತ್ತೆಯಾದವರು.
ಈ ಬಗ್ಗೆ ಮಹಿಳೆಯ ಪತಿ ಶಿವಕುಮಾರ್ ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
“ಬಿಳಿನೆಲೆಯ ನೆಟ್ಟಣದಲ್ಲಿರುವ ವಾಹನ ಇನ್ಶೂರೆನ್ಸ್ ಏಜೆನ್ಸಿ ಅಂಗಡಿ ಯೊಂದರಲ್ಲಿ ಉದ್ಯೋಗಿಯಾಗಿದ್ದ ಮಂಜುಳಾ ಆ. 25 ರಂದು ಮುಂಜಾನೆ ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಬಳಿಕ ಆಕೆಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಎಲ್ಲೆಡೆ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ” ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಪುತ್ತೂರು ಡೇ ಲೈಟ್ ಮರ್ಡರ್ ಅಪ್ಡೇಟ್: ಹತ್ಯೆ ಬಗ್ಗೆ ಎಸ್ಪಿ ಹೇಳಿದ್ದೇನು ?!
