Home » ಕಡಬ : ಪ್ರಾಣಿ ಬೇಟೆ ಮೂವರ ಬಂಧನ

ಕಡಬ : ಪ್ರಾಣಿ ಬೇಟೆ ಮೂವರ ಬಂಧನ

by Praveen Chennavara
1 comment
Dakshina Kannada

Dakshina Kannada  : ಕಾಡು ಪ್ರಾಣಿಗಳ ಬೇಟೆಯಾಡಿ ಕಡಬ ಪೋಲಿಸರ ಬಲೆಗೆ ಬಿದ್ದ ಮೂರು ಆರೋಪಿಗಳ ಬಂಧನವಾದ ಘಟನೆ ಠಾಣಾ ವ್ಯಾಪ್ತಿಯ ಕುಂತೂರು ಬಳಿ ಮಂಗಳವಾರ ನಡೆದಿದೆ.ಬಲ್ಯ ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಮುಂಜಾವಿನ‌ವೇಳೆ ಮನೆಯ ಕಡೆ ತೆರಳುತ್ತಿದ್ದಾಗ ಗುಸ್ತು ತಿರುಗುತ್ತಿದ್ದ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ (Dakshina Kannada). ಬಂಧಿತರನ್ನು ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ. ಕಡಬ ಎಸ್ಐ ಆಂಜನೇಯ ರೆಡ್ಡಿ

ಸಿಬ್ಬಂದಿಗಳು ಕುಂತೂರು ಬಳಿ ಬಂದಾಗ ಇನ್ನೋವ ಕಾರು ಅನುಮಾನಾಸ್ಪದವಾಗಿ ಚಲಾಯಿಸುತ್ತಿರುವುದು ಕಂಡು ಬಂತು, ವಾಹನ‌ ನಿಲ್ಲಿಸಿ ತಪಾಸನೆ ಮಾಡಿದಾಗ ಕಾರಿನಲ್ಲಿ ಬೇಟೆಯಾಡಿದ ಪ್ರಾಣಿಗಳು ಕಂಡು ಬಂದಿದೆ ಮೂವರು ಬೇಟೆಗಾರರು, ಬೇಟೆಯಾಡಿಡ ಒಂದು ಮುಳ್ಳು ಹಂದಿ, ಎರಡು ಬರಿಂಕ, ಒಂದು ಬೆರು ಎನ್ನುವ ಪ್ರಾಣಿಗಳು ಪತ್ತೆಯಾಗಿದೆ. ಜೊತೆಗೆ ಒಂದು ಕೋವಿ ಸಿಕ್ಕಿದೆ. ಮೂವರನ್ನು ಬಂದಿಸಿರು ವ ಪೋಲೀಸರು, ಬೇಟೆಯಾಡಿದ ಪ್ರಾಣಿ, ಕೋವಿ ಹಾಗೂ ಕಾರನ್ನು‌ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಪೋಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಕರಣ ದಾಖಲಿಸಲು ಆದೇಶಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Rolls Royce la Rose Noire: ಈ ಕಾರು ಅಂತಿಂಥ ಕಾರಲ್ಲ, 211 ಕೋಟಿ ಬೆಲೆಬಾಳುವ ಲಕ್ಸುರಿ ಕಾರು!!! ಅಂಥದ್ದೇನಿದೆ ಈ ಕಾರಲ್ಲಿ?

You may also like

Leave a Comment