Home » Mangalore: ಮಂಗಳೂರಿನ ಸಂತ ಅಲೋಶಿಯಸ್‌ ವಿದ್ಯಾರ್ಥಿ ರೋನಕ್‌ ಡೇಸಾ ಫೋಟೋಗ್ರಫಿಗೆ ಮನಸೋತ ಭಾರತೀಯ ರೈಲ್ವೇ

Mangalore: ಮಂಗಳೂರಿನ ಸಂತ ಅಲೋಶಿಯಸ್‌ ವಿದ್ಯಾರ್ಥಿ ರೋನಕ್‌ ಡೇಸಾ ಫೋಟೋಗ್ರಫಿಗೆ ಮನಸೋತ ಭಾರತೀಯ ರೈಲ್ವೇ

2 comments
Mangalore

Mangalore: ಪ್ರತಿಯೊಬ್ಬರಿಗೂ ಅವರದ್ದೇ ಆದ ಹವ್ಯಾಸ(Hobby)ರೂಡಿಯಾಗಿರುತ್ತದೆ. ಕೆಲವೊಮ್ಮೆ ನಮಗರಿವಿಲ್ಲದೆ ನಮ್ಮ ಹವ್ಯಾಸ, ಅಭ್ಯಾಸಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತದೆ. ಇದೇ ರೀತಿ, ಮಂಗಳೂರು(Mangalore)ನಗರದ ಸಂತ ಅಲೋಶಿಯಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ರೋನಕ್ ಡೇಸಾ ಅವರ ಕ್ಯಾಮೆರದಲ್ಲಿ ಸೆರೆಯಾದ ದೇಶದ ಪಾಕೃತಿಕ ಸೌಂದರ್ಯದ ನಡುವೆ ರೈಲುಗಳ ಆಕರ್ಷಕ ಪೋಟೋಗಳನ್ನು ಕಂಡು ರೈಲ್ವೆ ಸಚಿವಾಲಯ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದೆ.

Mangalore

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಬಿಬಿಎ ವಿದ್ಯಾರ್ಥಿ ರೋನಕ್ ಡೇಸಾ ಬಾಲ್ಯದಿಂದಲೇ ಅಜ್ಜನೊಂದಿಗೆ ರೈಲು ಪ್ರಯಾಣ ಮಾಡುತ್ತಿದ್ದರಂತೆ. ರೋನಕ್‌ ರೈಲುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಪರಿಣಾಮ ಪಿಯುಸಿ ವ್ಯಾಸಂಗದ ನಂತ್ರ ಕ್ಯಾಮೆರಾ (Camera)ಖರೀದಿ ಮಾಡಿ ಕಾಡುಗಳು, ಜಲಪಾತಗಳು, ಮೋಡ, ಪರ್ವತ, ಸುರಂಗಗಳು, ಸೇತುವೆಗಳು ಮತ್ತು ಹಾದುಹೋಗುವ ರೈಲುಗಳ ಚಿತ್ರಗಳನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ(Social Media)ಪೋಸ್ಟ್ ಮಾಡುತ್ತಿರುತ್ತಾರೆ. ಇವರ ಪ್ರತಿಯೊಂದು ಫೋಟೋ ಕೂಡ ಅರ್ಥಪೂರ್ಣ, ಮಾಹಿತಿಯುಕ್ತ ಕ್ಯಾಪ್ಶನ್ ನೀಡಿದ್ದು, ಅನೇಕ ವೀಡಿಯೋಗಳನ್ನು ಅವರು ತಮ್ಮ ಯೂಟ್ಯೂಬ್ ಚ್ಯಾನಲ್(YouTube Channel)ಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ.ಈ ರೀತಿ ಫೋಟೋಗಳನ್ನು ಅವರು ತಮ್ಮ ಫೇಸ್ ಬುಕ್, ಇನ್ ಸ್ಟಾಗ್ರಾಂ ಖಾತೆ ರೈಲ್‌ಬಾಯ್‌ರಾನ್‌(railboyron)ನಲ್ಲಿ ಪೋಸ್ಟ್ ಮಾಡಿದ ಫೋಟೋ ಈಗ ರಾಷ್ಟ್ರಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿದೆ.

ಒಂದಕ್ಕಿಂತ ಒಂದು ಭಿನ್ನವಾಗಿರುವ ಫೋಟೋಗಳನ್ನು ಕಂಡು ರೈಲ್ವೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ರೋನಕ್ ಡೇಸಾ ಅವರನ್ನು ಸಂಪರ್ಕಿಸಿದೆ. ರೈಲ್ವೆ ಸಚಿವಾಲಯ ಇಲ್ಲಿಯವರೆಗೆ ರೋನಕ್ ಡೇಸಾ ಅವರ 12ರಿಂದ 15 ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದು, ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಇದನ್ನು ಬಳಕೆ ಮಾಡಿದೆ.ಇದರ ಜೊತೆಗೆ, ಹೆಚ್ಚಿನ ಮಾಹಿತಿಗಾಗಿ ರೈಲ್ವೇ ಇಲಾಖೆ ಇವರನ್ನು ಸಂಪರ್ಕಿಸಿದೆ. ಇದಲ್ಲದೇ, ರೋನಕ್‌ ಡೇಸಾ ಅವರ ಸೇವೆಯನ್ನು ಗುರುತಿಸಿ, ರೈಲ್ವೆ ಇಲಾಖೆ ವಿಐಪಿ ಪಾಸ್‌ ನೊಂದಿಗೆ ಧಾರವಾಡ-ಬೆಂಗಳೂರು ಮತ್ತು ಕಾಸರಗೋಡು- ತಿರುವನಂತಪುರಂ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಫ್ಲ್ಯಾಗ್‌ ಆಫ್‌ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ಕೂಡ ನೀಡಿದೆ.

ಇದನ್ನೂ ಓದಿ: LPG Gas Cylinder Price Hike:ಬೆಳ್ಳಂಬೆಳಗ್ಗೆಯೇ ದೇಶದ ಜನತೆಗೆ ಬಿಗ್ ಶಾಕ್- ಮತ್ತೆ ಏರಿಕೆ ಕಂಡ LPG ಸಿಲಿಂಡರ್ ದರ

You may also like

Leave a Comment