2
Dakshina Kannada:ಪುತ್ತೂರು:ನೆಲ್ಲಿಕಟ್ಟೆ ನಿವಾಸಿ ನಗರಸಭಾ ಸದಸ್ಯ ಶಕ್ತಿಸಿನ್ಹಾ ಅವರು ಅ.17 ರಂದು ಹೃದಯಾಘಾತದಿಂದ ನಿಧನಹೊಂದಿದರು.
ಶಕ್ತಿ ಸಿನ್ಹ ಅವರು ನೆಲ್ಲಿಕಟ್ಟೆಯ ಮನೆಯಲ್ಲಿದ್ದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.ಈ ಹಿನ್ನಲೆಯಲ್ಲಿ ಬೆಳಿಗ್ಗೆ ಅವರನ್ನು ಅವರ ಮಗಳು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಮೃತರು ಇಬ್ಬರು ಪುತ್ರಿಯರು ಮತ್ತು ಅಳಿಯನನ್ನು ಅಗಲಿದ್ದಾರೆ.
