Home » Dakshina Kannada: ಕದ್ರಿ ಪಾರ್ಕಿನಲ್ಲಿ ವಿದ್ಯಾರ್ಥಿ ಜೋಡಿಯನ್ನು ಹಿಂದು-ಮುಸ್ಲಿಂ ಭಾವಿಸಿದ ಯುವಕರಿಂದ ಹಲ್ಲೆ;

Dakshina Kannada: ಕದ್ರಿ ಪಾರ್ಕಿನಲ್ಲಿ ವಿದ್ಯಾರ್ಥಿ ಜೋಡಿಯನ್ನು ಹಿಂದು-ಮುಸ್ಲಿಂ ಭಾವಿಸಿದ ಯುವಕರಿಂದ ಹಲ್ಲೆ;

0 comments

Dakshina Kannada: ಯುವಕ ಯುವತಿ ಕದ್ರಿ ಪಾರ್ಕಿಗೆ ಬಂದಿದ್ದ ಸಮಯದಲ್ಲಿ ಯುವಕರ ಗುಂಪೊಂದು ಯುವ ಜೋಡಿಯನ್ನು ಹಿಂದು ಮುಸ್ಲಿಂ ಎಂದು ಭಾವಿಸಿ ಹಲ್ಲೆಗೈದಿರುವ ಕುರಿತು ವರದಿಯಾಗಿದೆ.

ಕೇರಳ ಮೂಲದ ನರ್ಸಿಂಗ್‌ ವಿದ್ಯಾರ್ಥಿಗಳು ದೇರಳಕಟ್ಟೆಯ ಯೆನಪೋಯ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಮತ್ತು ನಂತೂರಿನ ಜಿಎನ್‌ಎಂ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿ ಜೊತೆ ಶುಕ್ರವಾರ ಬೆಳಗ್ಗೆ ಕದ್ರಿ ಪಾರ್ಕಿಗೆ ಬಂದಿದ್ದು, ಅವರನ್ನು ಹಿಂಬಾಲಿಸಿದ ಇತರೇ ವಿದ್ಯಾರ್ಥಿಗಳ ತಂಡ ಪಾರ್ಕ್‌ಗೆ ಬರುವಾಗ ಅಡ್ಡಗಟ್ಟಿ ಪ್ರಶ್ನೆ ಮಾಡಿರುವ ಕುರಿತು ವರದಿಯಾಗಿದೆ.

ಹಿಂದು ಯುವತಿ ಮುಸ್ಲಿ ಯುವಕ ಎಂದು ಭಾವಿಸಿ ಹಲ್ಲೆ ಮಾಡಲು ಯತ್ನ ಮಾಡಿದ್ದಾರೆ. ಅಲ್ಲದೇ ಅವರ ವೀಡಿಯೋ, ಫೋಟೋ ರೆಕಾರ್ಡ್‌ ಕೂಡಾ ಮಾಡಿರುವ ಕುರಿತು ವರದಿಯಾಗಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಕದ್ರಿ ಪೊಲೀಸರು ಯುವಕ ಯುವತಿಯನ್ನು ರಕ್ಷಣೆ ಮಾಡಿರುವ ಕುರಿತು ವರದಿಯಾಗಿದೆ. ಹಲ್ಲೆಗೆ ಮುಂದಾಗುದ್ದ ಮೂವರು ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕದ್ರಿ ಠಾಣೆಯಲ್ಲಿ ಇವರ ವಿರುದ್ಧ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಾಗಿರುವ ಕುರಿತು ವರದಿಯಾಗಿದೆ.

You may also like

Leave a Comment