Home » Mangaluru: ಭಗವಾಧ್ವಜ ಇರುವ ಅಂಗಡಿಯಲ್ಲಿ ಮಾತ್ರ ವ್ಯಾಪಾರ ಮಾಡಿ- ಹಿಂದೂ ಸಂಘಟನೆ ಕರೆ! ಮತ್ತೆ ವ್ಯಾಪಾರವನ್ನು ಸುತ್ತಿಕೊಂಡ ಧರ್ಮ ದಂಗಲ್

Mangaluru: ಭಗವಾಧ್ವಜ ಇರುವ ಅಂಗಡಿಯಲ್ಲಿ ಮಾತ್ರ ವ್ಯಾಪಾರ ಮಾಡಿ- ಹಿಂದೂ ಸಂಘಟನೆ ಕರೆ! ಮತ್ತೆ ವ್ಯಾಪಾರವನ್ನು ಸುತ್ತಿಕೊಂಡ ಧರ್ಮ ದಂಗಲ್

0 comments

Religion war in Mangaluru temple utsav Business : ಮಂಗಳೂರು(Mangaluru)ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ (Mangaladevi Utsava) ಧರ್ಮ ದಂಗಲ್ ಆರಂಭವಾಗಿದೆ. ದಸರಾ ಮಂಗಳದೇವಿ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿರುವ ಹಿನ್ನೆಲೆ(Religion war in Mangaluru temple utsav Business) ಭಾರೀ ವಿರೋಧ ವ್ಯಕ್ತವಾಗಿದ್ದು, ಈ ನಡುವೆ ಹಿಂದೂ ಸಂಘಟನೆಗಳು ಭಗವಾಧ್ವಜ ಇರುವ ಅಂಗಡಿಯಲ್ಲಿ ಮಾತ್ರ ಖರೀದಿ ಮಾಡಿ ಎಂದು ಕರೆ ನೀಡಿದೆ.

ಹಿಂದೂ ಸಂಘಟನೆಗಳ ವಿರೋಧದ ನಡುವೆಯು ದಕ್ಷಿಣ ಕನ್ನಡ ಜಿಲ್ಲಾಡಳಿತ ನಗರದ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದೆ.ಸರ್ಕಾರದ ಒತ್ತಡದಿಂದ ಅನ್ಯಮತೀಯ ಆರು ಅಂಗಡಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಶನಿವಾರ ಅನುಮತಿ ನೀಡಿದೆ. ಹೀಗಾಗಿ, ಇದಕ್ಕೆ ಟಕ್ಕರ್ ನೀಡಲು ಮುಂದಾಗಿರುವ ಹಿಂದೂ ಸಂಘಟನೆಗಳು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಿಂದೂಗಳ ಅಂಗಡಿಗಳಿಗೆ ಭಗವಾಧ್ವಜ ಹಾರಿಸಿದ್ದು, ಹಿಂದು ಅಂಗಡಿಗಳಲ್ಲಿಯೇ(Hindu Shops) ವ್ಯಾಪಾರ ಮಾಡಬೇಕೆಂದು ಕರೆ ನೀಡಿವೆ.

ಹಿಂದೂ ಸಂಘಟನೆಗಳು ಕರಾವಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಜಾತ್ರಾಮಹೋತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ವಿರೋಧಿಸಿ ವಿರೋಧಿಸುತ್ತಿದೆ. ಮಂಗಳಾದೇವಿಯ ನವರಾತ್ರಿ ಜಾತ್ರಾ ಮಹೋತ್ಸವದ ಸಂತೆ ವ್ಯಾಪಾರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿ ದೇವಾಲಯದ ಆಡಳಿತ ಮಂಡಳಿಯು ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅಂಗಡಿಗಳ ಕಾಲಂ ಮಾಡಿತ್ತು.

ಮಂಗಳೂರು ಮಂಗಳಾದೇವಿ ದೇವಸ್ಥಾನದ ಹೊರಗೆ ಪಾಲಿಕೆ ಜಾಗದಲ್ಲಿ ಟೆಂಡರ್‌ ಸಂದರ್ಭ ಸ್ಟಾಲ್‌ ಹಾಕಲು ಮುಸ್ಲಿಮರನ್ನು ದೂರ ಇರಿಸಲಾಗಿದೆ ಎಂದು ಆರೋಪಿಸಿ ದ.ಕ. ಮತ್ತು ಉಡುಪಿ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿತ್ತು. ಹೀಗಾಗಿ, ಜಿಲ್ಲಾಡಳಿತಕ್ಕೆ ಒತ್ತಡ ನೀಡಿ, ಮುಸ್ಲಿಂ ವ್ಯಾಪಾರಿಗಳಿಗೆ ಮಂಗಳಾದೇವಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಪಡೆದುಕೊಂಡಿದ್ದಾರೆ.ಇದರಿಂದ ಕುಪಿರತಾಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು, ಮುಸ್ಲಿಂ ವ್ಯಾಪಾರಿಗಳಿಗೆ ಟಕ್ಕರ್ ನೀಡಲು ದೇಗುಲಕ್ಕೆ ಬರುವ ಹಿಂದೂ ಭಕ್ತರಿಗೆ ಹಿಂದೂಗಳ ಅಂಗಡಿ ಎಂದು ಗೊತ್ತಾಗಬೇಕೆಂದು ಎಲ್ಲಾ ಹಿಂದೂಗಳ ಅಂಗಡಿ ಮುಂಭಾಗ ಭಗವಾಧ್ವಜ ಕಟ್ಟಿದ್ದು, ಭಕ್ತರು ಇಲ್ಲೇ ವ್ಯಾಪಾರ ಮಾಡಲು ಕರೆ ನೀಡಿದ್ದಾರೆ.

ಇದನ್ನೂ ಓದಿ: ದಸರಾ ಪ್ರಯುಕ್ತ ‘ಗೃಹಲಕ್ಷ್ಮೀ’ ಯರಿಗೆ ಭರ್ಜರಿ ಗಿಫ್ಟ್ ಘೋಷಿಸಿದ ಸರ್ಕಾರ- ಈ ಮಹಿಳೆಯರಿಗಂತೂ ಬಂಪರ್ ಲಾಟ್ರಿ

You may also like

Leave a Comment