Home » ದ.ಕ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು | ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಡಿ.13 ರೊಳಗೆ ಅರ್ಜಿ ಸಲ್ಲಿಸಿ

ದ.ಕ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ. ಪುತ್ತೂರು | ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಡಿ.13 ರೊಳಗೆ ಅರ್ಜಿ ಸಲ್ಲಿಸಿ

by Mallika
0 comments

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ.ಪುತ್ತೂರು ದ.ಕ ಇದರಲ್ಲಿ ಖಾಲಿ ಇರುವ ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ : ಶಾಖಾ ಮ್ಯಾನೇಜರ್‌ – 01 ಹುದ್ದೆ
ಲೆಕ್ಕಿಗ : 01 ಹುದ್ದೆ
ಕಿರಿಯ ಗುಮಾಸ್ತ : 01ಹುದ್ದೆ
ಅಟೆಂಡರ್‌ : 01 ಹುದ್ದೆ

ವೇತನ : ಶಾಖಾ ಮ್ಯಾನೇಜರ್‌ – ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.16,000-ರೂ.29,600 ಮಾಸಿಕ ವೇತನ ನೀಡಲಾಗುತ್ತದೆ.
ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ ಪರಿಶಿಷ್ಟ ಜಾತಿ, ಪಂಗಡ ಅಥವಾ ಹಿಂದುಳಿದ ವರ್ಗಗಳ ವರ್ಗ-೧ ಕ್ಕೆ ಸೇರಿದ ವ್ಯಕ್ತಿಗಳಿಗೆ 40 ವರ್ಷ, ಇತರ ಹಿಂದುಳಿದ ವರ್ಗಗಳ ವ್ಯಕ್ತಿಗಳಿಗೆ 38 ವರ್ಷ ಆಗಿರಬೇಕು.
ಅರ್ಜಿ ನಮೂನೆಯನ್ನು ಸಂಘದ ಪ್ರಧಾನ ಕಚೇರಿಯಿಂದ ಕಚೇರಿಯ ವೇಳೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಪಡೆದುಕೊಳ್ಳುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13-12-2022
ಅರ್ಜಿಯ ಜೊತೆಗೆ ರೂ.200+ ಜಿಎಸ್‌ಟಿ ನಗದನ್ನು ಪ್ರಧಾನ ಕಚೇರಿಯಲ್ಲಿ ಪಾವತಿಸುವ ರಶೀದಿಯನ್ನು ಲಗತ್ತಿಸಿರಬೇಕು. ಅರ್ಜಿಯ ಜೊತೆಗೆ ಅಭ್ಯರ್ಥಿಗಳ ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳ ಜೆರಾಕ್ಸ್‌ ಪ್ರತಿಗಳನ್ನು ಸ್ವಸಹಿಯೊಂದಿಗೆ ಲಗತ್ತಿಸಬೇಕು. ಸೂಕ್ತವಲ್ಲದ ದಾಖಲೆ ಪತ್ರಗಳು ಇಲ್ಲದ ಅರ್ಜಿಗಳನ್ನು ಮತ್ತು ಕೊನೆಯ ದಿನಾಂಖದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

You may also like

Leave a Comment