Home » ಕಾಣಿಯೂರು: ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯೋರ್ವರ ಮೃತದೇಹ ರೈಲ್ವೆ ಟ್ರ್ಯಾಕ್ ನಲ್ಲಿ ಪತ್ತೆ

ಕಾಣಿಯೂರು: ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯೋರ್ವರ ಮೃತದೇಹ ರೈಲ್ವೆ ಟ್ರ್ಯಾಕ್ ನಲ್ಲಿ ಪತ್ತೆ

by Praveen Chennavara
1 comment
kaniyur

Kaniyur : ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯೋರ್ವರ ಮೃತ ದೇಹ ಕಾಣಿಯೂರು (Kaniyur)ರೈಲ್ವೆ ಟ್ರ್ಯಾಕ್ ನಲ್ಲಿ   ಎ 6ರಂದು ಮಧ್ಯರಾತ್ರಿ ಪತ್ತೆಯಾಗಿದೆ.

ಮೃತಪಟ್ಟವರನ್ನು ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಬೀರ ಹೊಸೊಳಿಗೆ ದಿ.ಮೋನಪ್ಪ ಗೌಡರ ಪುತ್ರ ಕುಸುಮಾಧರ (34 ವ.)ಎಂದು ಗುರುತಿಸಲಾಗಿದೆ.

ಕುಸುಮಾಧರ ಅವರು ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತ ವಾಗಿದೆ. ಸುಮಾರು 10 ವರ್ಷಗಳಿಂದ  ಕೆ.ಎಸ್.ಆರ್.ಟಿ.ಸಿಯಲ್ಲಿ ಡ್ರೈವರ್ ಕಮ್ ಕಂಡಕ್ಟರ್ ಆಗಿದ್ದರು. ಕೆಲ ತಿಂಗಳುಗಳ ಹಿಂದೆ ಮದುವೆಯಾಗಿದ್ದ ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತರು ತಾಯಿ ಬಾಲಕ್ಕ, ಪತ್ನಿ ಜಯಶ್ರೀ, ಸಹೋದರರಾದ ವಾಸುದೇವ, ಚಿದಾನಂದ ಅವರನ್ನು ಅಗಲಿದ್ದಾರೆ

You may also like

Leave a Comment