Home » Dharmasthala : ಧರ್ಮಸ್ಥಳ ಪ್ರಕರಣ – ಇಂದು ಮತ್ತೆ ಅಗೆಯುವ ಕಾರ್ಯ ಪ್ರಾರಂಭ, ಏಕಕಾಲದಲ್ಲಿ 3 ಸಮಾಧಿಗಳ ಶೋಧ!!

Dharmasthala : ಧರ್ಮಸ್ಥಳ ಪ್ರಕರಣ – ಇಂದು ಮತ್ತೆ ಅಗೆಯುವ ಕಾರ್ಯ ಪ್ರಾರಂಭ, ಏಕಕಾಲದಲ್ಲಿ 3 ಸಮಾಧಿಗಳ ಶೋಧ!!

0 comments

Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ. ಇಂದು ಕೂಡ ಅಗೈಯುವ ಕಾರ್ಯ ಮುಂದುವರೆದಿದ್ದು ಇದೀಗ ಏಕಕಾಲದಲ್ಲಿ ಮೂರು ಜಾಗ ಅಗೆಯಲು ಎಸ್ ಐ ಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ (ಜು 29) ಅನಾಮಿಕ ಗುರುತಿಸಿದ ಮೊದಲ ಸಮಾಧಿಯನ್ನು ಕಾರ್ಮಿಕರ ಮೂಲಕ 4 ಅಡಿ ಅಗೆಸಲಾಯಿತು. ಕಳೆಬರ ಪತ್ತೆಯಾಗದ ಸಂದರ್ಭದಲ್ಲಿ ಬಳಿಕ ಜೆಸಿಬಿ ಮೂಲಕ 8 ಅಡಿ ಆಳ 15 ಅಡಿ ಅಗಲ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಲಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು. ಇಂದು ಮತ್ತೆ ಕಾರ್ಯವನ್ನು ಮುಂದುವರಿಸಿರುವ SIT ತಂಡ ಸಮಾಧಿ ಅಗೆಯುವ ಪ್ರಕ್ರಿಯೆ ತಡವಾಗುತ್ತಿರುವ ಹಿನ್ನೆಲೆ ಏಕಕಾಲದಲ್ಲಿ ಮೂರು ಸಮಾಧಿ ಅಗೆಯಲು ಎಸ್ ಐ ಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅಂದಹಾಗೆ ಸೋಮವಾರ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳಿಗೆ ಆಗಮಿಸಿರುವ ಎಸ್ ಐ ಟಿ ಗುರುತು ಮಾಡಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಿಸಿದೆ.

You may also like