Dharmasthala Case : ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಹೆಣ ಹೂತಿಟ್ಟ ಕೇಸ್ ವಿಚಾರವಾಗಿ ಇದೀಗ ಎಸ್ಐಟಿ ತಂಡವು ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಅನಾಮಿಕ ದೂರುದಾರನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಬೆನ್ನಲ್ಲೇ SIT ತಂಡದ ಮುಖ್ಯಸ್ಥ ಪ್ರಣಬ್ ಮಹಂತಿ ಅವರು ಮಂಗಳೂರಿಗೆ ಆಗಮಿಸಲಿದ್ದು, ಅವರ ಮುಂದೆ ಅನಾಮಿಕ ಸಾಕ್ಷಿದಾರನನ್ನು ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ ನಿನ್ನೆ (ಜು.26ರಂದು) ಎಸ್. ಐ. ಟಿ ಅಧಿಕಾರಿ ಡಿಐಜಿ ಎಂ.ಎನ್. ಅನುಚೇತ್ ಮುಂದೆ ಈ ಸಾಕ್ಷಿದಾರನು ಮುಸುಕು ದಾರಿಯಾಗಿ ಹಾಜರಾಗಿದ್ದರು. ಈ ವೇಳೆ ನಿರಂತರ ಎಂಟು ಗಂಟೆಗಳ ಕಾಲ ತನ್ನ ಹೇಳಿಕೆಯನ್ನು ನೀಡಿದ್ದಾರೆ. ತನ್ನಲ್ಲಿರುವ ಪ್ರತಿಯೊಂದು ಮಾಹಿತಿಯನ್ನು ಎಸ್. ಐ. ಟಿ ಮುಂದೆ ನೀಡಿರುವ ಮುಸುಕುಧಾರಿ ಸಾಕ್ಷಿದಾರ ನಂತರ ತನ್ನ ವಕೀಲರೊಂದಿಗೆ ನಿಗೂಢ ಸ್ಥಳಕ್ಕೆ ತೆರಳಿದ್ದರು. ಇಂದು ಮೊಹಾಂತಿಯವರು ಸಾಕ್ಷಿ ದೂರುದಾರನ ಹೇಳಿಕೆ ಕುರಿತಾದ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ.
