Dharmasthala : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಕ್ಷಿಪ್ರ ವೇಗವನ್ನು ಪಡೆದುಕೊಳ್ಳುತ್ತಿದೆ. ಎಸ್ಐಟಿ ತಂಡವು(ಜು. 28)ಇಂದು ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿಯ ಕಾಡಿಗೆ ಕರೆದೊಯ್ದು ಸ್ಥಳ ಮಹಜರನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಆ ಮಸುಕುದಾರಿ ದೂರುದಾರ ಸುಮಾರು 15 ಸ್ಥಳಗಳನ್ನು ಗುರುತಿಸಿದ್ದಾನೆ ಎನ್ನಲಾಗಿದೆ.
ಹೌದು, ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಕುರಿತಾಗಿ ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಇಂದು ( ಜುಲೈ 28 ) ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮಕ್ಕೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಆತ ತಾನು ಹೆಣವನ್ನು ಹೂತಿದ್ದ ಸುಮಾರು 15 ಸ್ಥಳಗಳನ್ನು ಗುರುತಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಅನಾಮಿಕ ವ್ಯಕ್ತಿ ತೋರಿಸಿದ ಜಾಗಗಳನ್ನು ಎಸ್ಐಟಿ ತಂಡ ಗುರುತು ಮಾಡಿಕೊಂಡಿದ್ದು ಇದೀಗ ಆ ಸ್ಥಳಗಳಲ್ಲಿ ತಲಾ ಇಬ್ಬರಂತೆ ಶಸ್ತ್ರ ಸಜ್ಜಿತ ಎಎನ್ಎಫ್ ಸಿಬ್ಬಂದಿಯನ್ನು ರಕ್ಷಣೆಗೆ ನಿಲ್ಲಿಸಲಾಗಿದೆ. ಅವರು ರಾತ್ರಿಪೂರ್ತಿ ಅಲ್ಲಿಯೇ ಭಾರಿ ಇರುತ್ತಾರೆ ಎಂಬುದು ಕೂಡ ದೃಢವಾಗಿದೆ. ಇನ್ನು ಆತ ಗುರುತಿಸಿದ ಸ್ಥಳಗಳಲ್ಲಿ ನಾಳೆ ಅಂದರೆ ಜುಲೈ 29ರಂದು ಉತ್ಖನನ ಕಾರ್ಯ ಕೂಡ ಶುರುವಾಗಲಿದೆ.
