Home » Dharmasthala Soujanya: ದಾವಣಗೆರೆಯಲ್ಲಿ ತಿಮರೋಡಿ ಕಿಡಿ ಕಿಡಿ! ಸೌಜನ್ಯ ಕೇಸ್ ತನಿಖಾಧಿಕಾರಿ ಯೋಗೇಶ್‌ಗೆ ಗಲ್ಲು ಹಾಕಬೇಕು, ಪೇಟಧಾರಿಗಳು ಧಾರ್ಮಿಕ ಭಯೋತ್ಪಾದಕರು !!!

Dharmasthala Soujanya: ದಾವಣಗೆರೆಯಲ್ಲಿ ತಿಮರೋಡಿ ಕಿಡಿ ಕಿಡಿ! ಸೌಜನ್ಯ ಕೇಸ್ ತನಿಖಾಧಿಕಾರಿ ಯೋಗೇಶ್‌ಗೆ ಗಲ್ಲು ಹಾಕಬೇಕು, ಪೇಟಧಾರಿಗಳು ಧಾರ್ಮಿಕ ಭಯೋತ್ಪಾದಕರು !!!

0 comments
Dharmasthala Soujanya

Dharmasthala Soujanya:ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಇಂದು ದಾವಣಗೆರೆಯಲ್ಲಿ ಸೌಜನ್ಯ ಕೊಲೆ ಬಗ್ಗೆ ಮಾತನಾಡಿದ್ದಾರೆ. ಹಾಗೂ ಹಲವು ವಿಷಯ ಮಾತನಾಡುತ್ತಾ ಕಿಡಿಕಾರಿದ್ದಾರೆ.

ಮಹೇಶ್‌ ಶೆಟ್ಟಿ ತಿಮರೋಡಿ ಅವರು ಇಂದು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ʼ ಧರ್ಮಸ್ಥಳದಲ್ಲಿ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಪ್ರಕರಣದ ಕುರಿತು ಹೇಳುತ್ತಾ, ಹನ್ನೊಂದು ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎಂದು ಎಂದು ಇನ್ನೂ ಗೊತ್ತಾಗಿಲ್ಲ. ಲಕ್ಷಾಂತರ ರೂಪಾಯಿ ಆಸ್ತಿಯನ್ನು ಧರ್ಮಸ್ಥಳದ ಪೇಟದಾರಿಗಳು ಮಾಡಿದ್ದಾರೆ, ಹಾಗೂ ಧಾರ್ಮಿಕ ವಿಷಯದಲ್ಲಿ ಇವರು ಭಯೋತ್ಪಾದಕರು ಎಂಬ ಮಾತನ್ನು ಹೇಳುತ್ತಾ ತಮ್ಮ ಆಕ್ರೋಶ ಹೊರ ಹಾಕಿದರು.

ಇನ್ನೂ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಸೌಜನ್ಯ ತನಿಖಾಧಿಕಾರಿ ಯೋಗಿಶ್‌ನನ್ನು ಮೊದಲು ಗಲ್ಲಿಗೆ ಹಾಕಬೇಕು ಎಂಬ ಆಕ್ರೋಶದ ಮಾತನ್ನಾಡಿದ್ದಾರೆ. ಸೌಜನ್ಯ (Dharmasthala Soujanya) ರೇಪ್‌ ಆಂಡ್‌ ಮರ್ಡರ್‌ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ. ಇವರನ್ನು ಮಂಜುನಾಥ ಸ್ವಾಮಿಯೇ ನೋಡಿಕೊಳ್ಳುತ್ತಾನೆ ಎಂಬ ಮಾತನ್ನು ಹೇಳಿದ್ದಾರೆ.

ಸೌಜನ್ಯ ಸಾವಿಗೀಡಾದಾಗ ಅಂದಿನ ಸಿಎಂ ಡಿವಿ ಸದಾನಂದ ಗೌಡ, ಗೃಹ ಸಚಿವ ಆರ್‌ ಅಶೋಕ, ಬಿಎಸ್‌ ಯಡಿಯೂರಪ್ಪ, ಶೋಭ ಕರಂದ್ಲಾಜೆ ಬಂದಿದ್ದರು. ಆದರೆ ಧರ್ಮಸ್ಥಳದಲ್ಲಿ ಪ್ರಸಾದ ಸ್ವೀಕರಿಸಿ ವಾಪಸ್‌ ಹೋಗಿದ್ದಾರೆ. ಯಾಕೆ ಸೌಜನ್ಯ ಮನೆಗೆ ಭೇಟಿ ನೀಡಿದಲ್ಲ ಎಂಬ ಪ್ರಶ್ನೆಗೆ ಭದ್ರತೆ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ವಿರುದ್ಧವೂ ತಿಮರೋಡಿ ತಮ್ಮ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: MESCOM Jobs: ಮೆಸ್ಕಾಂ ನಲ್ಲಿ ಭರ್ಜರಿ ಉದ್ಯೋಗವಕಾಶ! 200 ಹುದ್ದೆಗಳು, ಇಲ್ಲಿದೆ ಸಂಪೂರ್ಣ ವಿವರ!

You may also like