ಸುಳ್ಯ : ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮನೆಯೊಂದರ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದು ಮನೆಯ ವಿದ್ಯುತ್ ಆಧಾರಿತ ಉಪಕರಣಗಳಿಗೆ ಸಂಪೂರ್ಣ ಹಾನಿ ಉಂಟಾದ ಘಟನೆ ಅ.19 ರಂದು ಸಂಭವಿಸಿದೆ.
ಕುಂಡಡ್ಕ ನಿವಾಸಿ ಭಾಸ್ಕರ ಅವರ ಮನೆಯ ವಿದ್ಯುತ್ ಪರಿಕರಕ್ಕೆ ಸಿಡಿಲು ಬಡಿದಿದೆ. ಇದರ ಪರಿಣಾಮ ವಿದ್ಯುತ್ ಸ್ವಿಚ್ ಬೋರ್ಡ್, ಮೀಟರ್ ಕಳಚಿ ಬಿದ್ದಿದ್ದು ಡಿಶ್, ಟಿ.ವಿ.ಸಹಿತ ವಿದ್ಯುತ್ ಆಧಾರಿತ ಮನೆ ಬಳಕೆಯ ವಸ್ತುಗಳು ಸಂಪೂರ್ಣ ಹಾನಿ ಉಂಟಾಗಿ ಸಾವಿರಾರು ರೂ.ನಷ್ಟ ಸಂಭವಿಸಿದೆ.