0
ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ,ಸುಳ್ಯ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರ ಹೆಸರಿನಲ್ಲಿ ಫೇಸ್‌ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.
ರಾಕೇಶ್ ರೈ ಕೆಡೆಂಜಿ ಅವರ ಹೆಸರು,ಪೋಟೋ ಬಳಸಿ ಪೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಹಲವರಿಗೆ ಸ್ನೇಹಿತರರಾಗಿ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇರಿಸಿದ್ದಾರೆ.
ಈ ಬಗ್ಗೆ ಸ್ನೇಹಿತರಿಂದ ಮಾಹಿತಿ ಪಡೆದ ರಾಕೇಶ್ ರೈ ಅವರು, ಇದೊಂದು ನಕಲಿಯಾಗಿ ಸೃಷ್ಟಿಸಿದ ಪೇಸುಬುಕ್ ಖಾತೆ ಆಗಿದ್ದು ಯಾರೂ ಕೂಡ ಹಣ ಕಳುಹಿಸಬೇಡಿ ಎಂದು ವಿನಂತಿಸಿದ್ದಾರೆ.
Gpay ಮೂಲಕ ಹಣ ಪಾವತಿಸುವಂತೆ ಕೇಳಿಕೊಳ್ಳುತ್ತಿದ್ದು,ಯಾರೂ ಹಣ ಪಾವತಿಸದಂತೆ ವಿನಂತಿಸಿದ್ದಾರೆ.
