Home » ಕಾಲೇಜು ಕಟ್ಟಿ ಬೆಳೆಸಿದ ಧೀಮಂತನಿಗೆ ಅಂತಿಮ ನಮನ-ಪಂಚಭೂತಗಳಲ್ಲಿ ಲೀನವಾದ ಡಾ|ಬಿ. ಯಶೋವರ್ಮ!! ದೇವರಿಗೇನಿತ್ತು ಅವಸರ

ಕಾಲೇಜು ಕಟ್ಟಿ ಬೆಳೆಸಿದ ಧೀಮಂತನಿಗೆ ಅಂತಿಮ ನಮನ-ಪಂಚಭೂತಗಳಲ್ಲಿ ಲೀನವಾದ ಡಾ|ಬಿ. ಯಶೋವರ್ಮ!! ದೇವರಿಗೇನಿತ್ತು ಅವಸರ

0 comments

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್.ಡಿ.ಎಮ್ ಡಿಗ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಯಶೋವರ್ಮ (66)
ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಉಜಿರೆ ನೀರಚಿಲುವೆ ಅವರ ನಿವಾಸದ ಬಳಿ ಇರುವ ಗದ್ದೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸಂಜೆ 7 ಗಂಟೆ ವೇಳೆಗೆ ನೆರವೇರಿಸಲಾಯಿತು.

ಚಾರ್ಮಾಡಿಯಿಂದ ಮೆರವಣಿಗೆಯ ಮೂಲಕ ಪಾರ್ಥೀವ ಶರೀರವನ್ನು ಉಜಿರೆಗೆ ತಂದು ಬಳಿಕ ಕಾಲೇಜಿನ ಒಳಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಮಂದಿ ಜಾತಿ ಮತ ಧರ್ಮಗಳ ಭೇದವಿಲ್ಲದೇ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಬಳಿಕ ಅವರ ನೀರಚಿಲುವೆ ನಿವಾಸದ ಬಳಿಯಿರುವ ಗದ್ದೆಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಯಶೋವರ್ಮ ಅವರ ಹಿರಿಯ ಪುತ್ರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

You may also like

Leave a Comment