Home » Kavitha Sanil: ಮಂಗಳೂರಿನ ಮಾಜಿ ಮೇಯರ್‌ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ

Kavitha Sanil: ಮಂಗಳೂರಿನ ಮಾಜಿ ಮೇಯರ್‌ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ

0 comments
Kavitha Sanil

Kavitha Sanil: ಕಾಂಗ್ರೆಸ್‌ ನಾಯಕಿ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಕವಿತಾ ಸನಿಲ್‌ ಅವರು ಬಿಜೆಪಿ ಸೇರಿದ್ದಾರೆ.

ಬಂಟ್ವಾಳ ಬಿಸಿ ರೋಡ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕವಿತಾ ಸನಿಲ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇವರ ಜೊತೆಗೆ ಬಂಟ್ವಾಳದ ತಾಲೂಕು ಪಂಚಾಯತ್‌ ಸದಸ್ಯ ಗಂಗಾಧರ ಪೂಜಾರಿ ಅವರು ಕೂಡಾ ಬಿಜೆಪಿ ಸೇರಿದ್ದಾರೆ.

ನನ್ನ ರಾಜಕೀಯ ಗುರು ಜನಾರ್ಧನ ಪೂಜಾರಿ ಅವರ ಆಶೀರ್ವಾದ ಪಡೆದು ಇಲ್ಲಿಗೆ ಬಂದಿದ್ದೇನೆ. ಆಸೆ ಇಟ್ಟುಕೊಂಡು ಬಿಜೆಪಿ ಸೇರಿದ್ದೀನಿ ಅಂತ ಅಂದ್ಕೊಳ್ಳಬೇಡಿ. ಮೋದಿ ಅವರ ಆಡಳಿತ ನೋಡಿ ಬಿಜೆಪಿ ಸೇರುತ್ತಿದ್ದೇನೆ ಎಂದು ಸಮಾವೇಶದಲ್ಲಿ ಕವಿತಾ ಸನಿಲ್‌ ಅವರು ಮಾತನಾಡುತ್ತಾ ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಆಗಿರುವುದು ನಮ್ಮೆಲ್ಲರ ಭಾಗ್ಯ ಈ ಬಾರಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್‌ ಚೌಟರನ್ನು ನಾವು ಗೆಲ್ಲಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: Hubballi: ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದಕ್ಕೆ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು; ನೇಹಾ ತಂದೆ ಮಾತು

You may also like

Leave a Comment