Home » ಗುರುಪುರ-ಕೈಕಂಬ: ಅದ್ದೂರು-ಕಾಜಿಲ ಬಳಿ ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ!! ಪಿಯುಸಿ ವಿದ್ಯಾರ್ಥಿನಿ ಬಾಲಕಿ ಸಾವು

ಗುರುಪುರ-ಕೈಕಂಬ: ಅದ್ದೂರು-ಕಾಜಿಲ ಬಳಿ ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ!! ಪಿಯುಸಿ ವಿದ್ಯಾರ್ಥಿನಿ ಬಾಲಕಿ ಸಾವು

0 comments

ಮಂಗಳೂರು:ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಬಾಲಕಿಯೋರ್ವಳು ಮೃತಪಟ್ಟ ಮಂಗಳೂರು ಹೊರವಲಯದ ಕಾಜಿಲ ಎಂಬಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಕರಿಯಂಗಳ ಪಳ್ಳಿಪ್ಪಾಡಿ ನಿವಾಸಿ ಆಸ್ನ(16) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಬಾಲಕಿ ತನ್ನ ತಾಯಿಯೊಂದಿಗೆ ಆಟೋ ಒಂದರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಗುರುಪುರ ಕೈಕಂಬದತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ಕೈಕಂಬ ಪೊಳಲಿ ದ್ವಾರದಿಂದ ಅದ್ದೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಆಟೋ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕೂಡಲೇ ಸ್ಥಳೀಯರು ಗಾಯಲುಗಳನ್ನು ಆಸ್ಪತ್ರೆಗೆ ದಾಖಲಿಸಿದರಾದರೂ,ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಅಪಘಾತಕ್ಕೆ ಟಿಪ್ಪರ್ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆ ಎಂದು ಆರೋಪಿಸಲಾಗಿದ್ದು, ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment