Home » ಮಂಗಳೂರು : ಹಳೆಯ ದ್ವೇಷ ಯುವಕನ ಮೇಲೆ ತಂಡದಿಂದ ಮಾರಕಾಯುಧದಿಂದ ದಾಳಿ

ಮಂಗಳೂರು : ಹಳೆಯ ದ್ವೇಷ ಯುವಕನ ಮೇಲೆ ತಂಡದಿಂದ ಮಾರಕಾಯುಧದಿಂದ ದಾಳಿ

by Praveen Chennavara
0 comments

ಮಂಗಳೂರು : ಹಳೆಯ ದ್ವೇಷದಿಂದ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಾಳಿಗೊಳಗಾದ ಯುವಕನನ್ನು ಶ್ರವಣ್ ಎಂದು ಗುರುತಿಸಲಾಗಿದೆ.

ಎಂಟು ಮಂದಿಯನ್ನು ಒಳಗೊಂಡ ತಂಡವೊಂದು ಶ್ರವಣ್‌ಗೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದ್ರಜಿತ್‌ನನ್ನು ತಲವಾರ್ ಜಗ್ಗ ಗ್ಯಾಂಗ್ (ಬೋಳೂರು ಗ್ಯಾಂಗ್) ಕೊಲೆಗೈದಿತ್ತು. ಅದೇ ದ್ವೇಷದಿಂದ ಶ್ರವಣ್‌ನ ಕೊಲೆಯತ್ನ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಸೆ.307ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕೃತ್ಯದಲ್ಲಿ ಯಾವುದೇ ಕೋಮು ಬಣ್ಣವಿಲ್ಲ. ಎಲ್ಲರೂ ಒಂದು ಸಮುದಾಯಕ್ಕೆ ಸೇರಿದವರು ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.

You may also like

Leave a Comment