3
ಮಂಗಳೂರಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದ ಕಾರಣ ತಡೆಯಲು ಬಂದ ಪೊಲೀಸರ ಮೇಲೂ ಹಲೈಗೈದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗುರುವಾರ ( ನಿನ್ನೆ) ಮಧ್ಯಾಹ್ನ ಮದುವೆ ಸಮಾರಂಭವೊಂದು ತೊಕ್ಕೊಟ್ಟುವಿನಲ್ಲಿ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕೇರಳ ಕಾಸರಗೋಡಿನ ವರನಿಗೆ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ಕಡೆಯ ಯುವಕನೋರ್ವ ವಧುವಿನ ಕಡೆಯ ಯುವತಿಯನ್ನು ಚುಡಾಯಿಸಿದ್ದಾನೆನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿ ಸಹೋದರ ಚುಡಾಯಿಸಿದವರಿಗೆ ಹಲ್ಲೆ ನಡೆಸಿದ್ದು, ಇದರಿಂದ ಗುಂಪಿನ ನಡುವೆ ಗಲಾಟೆ ಜೋರಾಯಿತು. ಕೂಡಲೇ ಉರೂಸ್ ಬಂದೋಬಸ್ತಿನಲ್ಲಿದ್ದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
